ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು ತಮಿಳುನಾಡಿನ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಎಲ್ಲಾ 6 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ತಮಿಳುನಾಡಿನ ವೆಲ್ಲೂರು ಜೈಲಿನಿಂದ ಪ್ರಮುಖ ಅಪರಾಧಿ ನಳಿನಿ ಶ್ರೀಹರನ್, ರವಿಚಂದ್ರನ್, ಸಂತನ್, ಮುರುಗನ್, ಜೈಕುಮಾರ್, ರಾಬರ್ಟ್ ಪೈಸ್ ಸೇರಿದಂತೆ ಎಲ್ಲಾ 6 ದೋಷಿಗಳನ್ನು ಬಿಡುಗಡೆ ಮಾಡಲಾಗಿದೆ.
ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನಿನ್ನೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಿಡುಗಡೆಗೊಳಿಸಲಾಗಿದೆ.