ಚಿತ್ರದುರ್ಗ: ಮುರುಘಾ ಮಠದಲ್ಲಿ 47 ಫೊಟೋ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀನಿವಾಸ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅ.6ರಂದು ಮುರುಘಾ ಮಠದಲ್ಲಿ ಇದ್ದ ಫೋಟೋಗಳು ಕಳುವಾಗಿದ್ದವು. ಸಿಸಿಟಿವಿ ಕ್ಯಾಮರಾದಲ್ಲಿ ಇಬ್ಬರು ಕಳ್ಳರ ಕೈಚಳಕ ಸೆರೆಯಾಗಿತ್ತು. ಪ್ರಕರಣ ಸಂಬಂಧ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಹಾಗೂ ಶ್ರೀನಿವಾಸ್ ಎಂಬುವವರನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಶ್ರೀನಿವಾಸ್ ನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ.
ಈ ವೇಳೆ ಚಿತ್ರದುರ್ಗ ಸೆಷನ್ ನ್ಯಾಯಾಲಯ ಆರೋಪಿ ಶ್ರೀನಿವಾಸ್ ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.