ನವದೆಹಲಿ: ಟ್ವಿಟರ್, ಮೈಕ್ರೋಸಾಫ್ಟ್, ಫೇಸ್ಬುಕ್ ಬೆನ್ನಲ್ಲೇ ಅಮೆರಿಕದ ಇ -ಕಾಮರ್ಸ್ ದಿಗ್ಗಜ ಅಮೆಜಾನ್ ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸಲು ಮುಂದಾಗಿದೆ.
ಆರ್ಥಿಕ ಹಿಂಜರಿತ ಸಂಭವದ ಬಗ್ಗೆ ಮುನ್ಸೂಚನೆ ಹಿನ್ನೆಲೆಯಲ್ಲಿ ನಷ್ಟ ಕಡಿಮೆ ಮಾಡುವ ಉದ್ದೇಶದಿಂದ ಉದ್ಯೋಗಿಗಳ ವಜಾ ಅನಿವಾರ್ಯ ಎಂದು ಅಮೆಜಾನ್ ಹೇಳಿದೆ. ಕಳೆದ ವಾರ ನೇಮಕಾತಿ ಪ್ರಕ್ರಿಯೆ ಸದ್ಯಕ್ಕೆ ತಡೆ ಹಿಡಿಯುವುದಾಗಿ ಘೋಷಿಸಿದ್ದ ಅಮೆಜಾನ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ತಮ್ಮನ್ನು ಅಮೆಜಾನ್ ಕಂಪನಿ ಕೆಲಸದಿಂದ ವಜಾಗೊಳಿಸಿದ ಬಗ್ಗೆ ಅಮೆಜಾನ್ ಉದ್ಯೋಗಿ ಜೇಮಿ ಜಾಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಲಾಭದಾಯಕವಲ್ಲದ ವಿಭಾಗದಲ್ಲಿರುವ ಸಿಬ್ಬಂದಿಯನ್ನು ಮೊದಲು ಮನೆಗೆ ಕಳುಹಿಸಲು ಅಮೆಜಾನ್ ಮುಂದಾಗಿದ್ದು, ಈ ವಿಭಾಗದಲ್ಲಿ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ವಿಭಾಗ ಕೂಡ ಸೇರಿದೆ ಎಂದು ಹೇಳಲಾಗಿದೆ.