alex Certify ಸಾನಿಯಾ ಮಿರ್ಜಾಗೆ ಮೋಸ ಮಾಡಿದ್ರಾ ಶೋಯೆಬ್‌ ಮಲಿಕ್‌ ? ವೈರಲ್‌ ಆಗಿವೆ ಪಾಕ್‌ ರೂಪದರ್ಶಿ ಜೊತೆಗಿರುವ ಫೋಟೋಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾನಿಯಾ ಮಿರ್ಜಾಗೆ ಮೋಸ ಮಾಡಿದ್ರಾ ಶೋಯೆಬ್‌ ಮಲಿಕ್‌ ? ವೈರಲ್‌ ಆಗಿವೆ ಪಾಕ್‌ ರೂಪದರ್ಶಿ ಜೊತೆಗಿರುವ ಫೋಟೋಗಳು….!

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಚ್ಛೇದನ ಪಡೆಯಲಿದ್ದಾರೆ ಅನ್ನೋ ಸುದ್ದಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಸಾನಿಯಾ ಹಾಗೂ ಶೋಯೆಬ್‌ ಪ್ರತಿಕ್ರಿಯಿಸಿಲ್ಲ. ಈ ವದಂತಿಗಳ ನಡುವೆಯೇ ಶೋಯೆಬ್ ಮಲಿಕ್ ಅವರ ಕೆಲವು ಫೋಟೋಗಳು ವೈರಲ್‌ ಆಗಿವೆ. ಶೋಯೆಬ್‌, ಪಾಕಿಸ್ತಾನಿ ಮಾಡೆಲ್ ಆಯೇಷಾ ಒಮರ್ ಜೊತೆಯಲ್ಲಿರುವ ಫೋಟೋಗಳಿವು. ಈ ಫೋಟೋಗಳನ್ನು ನೋಡಿದ ನೆಟ್ಟಿಗರು, ಶೋಯೆಬ್‌ ಮಲಿಕ್ ಸಾನಿಯಾಗೆ ಮೋಸ ಮಾಡಿರಬಹುದು ಎನ್ನುತ್ತಿದ್ದಾರೆ.

ಶೋಯೆಬ್ ಹಾಗೂ ರೂಪದರ್ಶಿ ಆಯೇಶಾ ಈ ಫೋಟೋಗಳಲ್ಲಿ ತುಂಬಾನೇ ಕ್ಲೋಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಜುಕೊಳದಲ್ಲಿ ಎಂಜಾಯ್‌ ಮಾಡ್ತಿದ್ದಾರೆ. ಫೋಟೋಗಳಲ್ಲಿ ಶೋಯೆಬ್ ಮತ್ತು ಆಯೇಷಾ ನಡುವೆ ಅದ್ಭುತ ಕೆಮಿಸ್ಟ್ರಿ ಇದೆ. ಇದನ್ನೆಲ್ಲ ನೋಡ್ತಿದ್ರೆ ಬಹುಷಃ ಶೋಯೆಬ್‌ ಆ ಮಾಡೆಲ್‌ ಜೊತೆಗೆ ಅಫೇರ್‌ ಇಟ್ಟುಕೊಂಡಿರಬಹುದು ಅಂತಾ ನೆಟ್ಟಿಗರು ಮಾತನಾಡಿಕೊಳ್ತಿದ್ದಾರೆ. ಇಬ್ಬರೂ ತುಂಬಾನೇ ಮಾದಕ ಸ್ಟೈಲ್‌ನಲ್ಲಿ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

ಮೊದಲ ಫೋಟೋದಲ್ಲಿ ಶೋಯೆಬ್ ಮತ್ತು ಆಯೇಶಾ ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದು, ಎರಡನೆಯದರಲ್ಲಿ ಇಬ್ಬರೂ ತುಂಬಾ ಮಾದಕ ಸ್ಟೈಲ್ ನಲ್ಲಿ ಪೋಸ್ ನೀಡಿದ್ದಾರೆ.ಇಬ್ಬರದ್ದೂ ಮದುವೆ ಪ್ಲಾನಿಂಗ್‌ ಇದೆಯಾ ಅಂತ ಕೇಳಿದ್ದಕ್ಕೆ ಇಲ್ಲ, ನನಗವರು ಆತ್ಮೀಯ ಗೆಳೆಯ, ನನ್ನ ಬಗ್ಗೆ ಕೇರ್‌ ಮಾಡ್ತಾರೆ ಅಂತಾನೇ ಆಯೇಷಾ ರಿಪ್ಲೈ ಮಾಡಿದ್ದಾಳೆ.

 

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...