ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಲಕ್ಷ್ಮಿ ಅನುಗ್ರಹದಿಂದ ಮಾತ್ರ ಜೀವನದಲ್ಲಿ ಸಂಪತ್ತು ಮತ್ತು ವೈಭವ ಪಡೆಯಲು ಸಾಧ್ಯ. ಜ್ಯೋತಿಷಿಗಳ ಪ್ರಕಾರ, ಶುಕ್ರವಾರದಂದು ಕೆಲವು ವಿಶೇಷ ಕ್ರಮಗಳನ್ನು ಮಾಡುವ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು. ಲಕ್ಷ್ಮಿಯನ್ನು ಮೆಚ್ಚಿಸಲು, ಆಕೆಯ ಆಶೀರ್ವಾದ ಪಡೆಯಲು ಶುಕ್ರವಾರ ಭಕ್ತರು ವಿಶೇಷ ಪೂಜೆ ಮಾಡ್ಬೇಕು.
ಶುಕ್ರವಾರದ ವ್ರತವನ್ನು ಆಚರಿಸುವುದರಿಂದ ಲಕ್ಷ್ಮಿಯ ಅನಂತ ಕೃಪೆ ಲಭಿಸುತ್ತದೆ. ಶುಕ್ರವಾರದ ದಿನ ಬೆಳಿಗ್ಗೆ ಮತ್ತು ಸಂಜೆ ಲಕ್ಷ್ಮಿಯನ್ನು ಪೂಜಿಸಬೇಕು. ಈ ದಿನದಂದು ಓಂ ಶುಂ ಶುಕ್ರಾಯ ನಮಃ ಮಂತ್ರವನ್ನು ಜಪಿಸಬೇಕು.
ಬಿಳಿ ಲಕ್ಷ್ಮಿಗೆ ಪ್ರಿಯವಾದ ಬಣ್ಣ. ಹಾಗಾಗಿ ಶುಕ್ರವಾರ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡಿದ್ರೆ ಜೀವನದಲ್ಲಿ ಸಮೃದ್ಧಿ ಲಭಿಸುತ್ತದೆ. ಶುಕ್ರವಾರದಂದು ಇರುವೆ ಮತ್ತು ಹಸುವಿಗೆ ಹಿಟ್ಟು ನೀಡಬೇಕು. ಇದ್ರಿಂದ ಅದೃಷ್ಟ ಪ್ರಾಪ್ತಿಯಾಗುತ್ತದೆ.
ಶುಕ್ರವಾರದಂದು ಶುದ್ಧ ತುಪ್ಪದ ದೀಪವನ್ನು ಹಚ್ಚಬೇಕು. ತುಳಸಿ ಗಿಡವನ್ನು ಪೂಜಿಸುವುದರಿಂದಲೂ ಲಕ್ಷ್ಮಿ ಸಂತೋಷಗೊಳ್ತಾಳೆ. ಇದಲ್ಲದೆ ಶುಕ್ರವಾರ ಲಕ್ಷ್ಮಿಗೆ ಕೆಂಪು ಬಟ್ಟೆ, ಕೆಂಪು ಬಿಂದಿ, ಸಿಂಧೂರ, ಮತ್ತು ಕೆಂಪು ಬಳೆಗಳನ್ನು ಅರ್ಪಿಸಬೇಕು. ಇದಲ್ಲದೆ ಶುಕ್ರವಾರ ಶಂಖದ ಪೂಜೆ ಮಾಡಬೇಕು. ಶುಕ್ರವಾರ ಲಕ್ಷ್ಮೀ ನಾರಾಯಣ ಪೂಜೆ ಮಾಡೋದ್ರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.