alex Certify ಟಿಕೆಟ್‌ ಇಲ್ಲದೆಯೇ ಮಾಡಬಹುದು ಈ ರೈಲಿನಲ್ಲಿ ಉಚಿತ ಪ್ರಯಾಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕೆಟ್‌ ಇಲ್ಲದೆಯೇ ಮಾಡಬಹುದು ಈ ರೈಲಿನಲ್ಲಿ ಉಚಿತ ಪ್ರಯಾಣ….!

ರೈಲು ಪ್ರಯಾಣಿಕರಿಗೆ ಖುಷಿ ಕೊಡುವ ಸುದ್ದಿ ಇದು. ಟಿಕೆಟ್‌ ಇಲ್ಲದೇ ಉಚಿತವಾಗಿ ರೈಲಿನಲ್ಲಿ ಪ್ರಯಾಣ ಮಾಡಲು ಇರುವ ಸದಾವಕಾಶ. ವಿಶೇಷ ರೈಲೊಂದು ಕಳೆದ 74 ವರ್ಷಗಳಿಂದ ಜನರಿಗೆ ಉಚಿತ ಪ್ರಯಾಣವನ್ನು ಕಲ್ಪಿಸಿಕೊಡ್ತಿದೆ. ಈ ಟ್ರೈನ್‌ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಷ್ಟಕ್ಕೂ ಇದ್ಯಾವ ರೈಲು? ಯಾವ್ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಅನ್ನೋದನ್ನು ತಿಳಿಯೋಣ.

ಈ ರೈಲಿನ ಹೆಸರು ‘ಭಾಗ್ರಾ-ನಂಗಲ್ ರೈಲು’. ಇದು ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ರೈಲನ್ನು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ ನಿರ್ವಹಣೆ ಮಾಡುತ್ತಿದೆ. ನೀವು ಭಾಕ್ರಾ-ನಂಗಲ್ ಅಣೆಕಟ್ಟಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದರೆ ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಭಾರತೀಯ ರೈಲ್ವೆಯ ವೆಬ್‌ಸೈಟ್ ಪ್ರಕಾರ ಈ ರೈಲು 1948ರಲ್ಲಿ ಪ್ರಾರಂಭವಾಯಿತು. ಭಾಕ್ರಾ ನಂಗಲ್ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ರೈಲು ಓಡಾಟದ ಅಗತ್ಯವಿತ್ತು. ಹಾಗಾಗಿ ಆ ಸಮಯದಲ್ಲೇ ಇದನ್ನು ಪ್ರಾರಂಭ ಮಾಡಲಾಗಿದೆ.

ಭಾಕ್ರಾ-ನಂಗಲ್ ರೈಲು ಗಂಟೆಗೆ 18 ರಿಂದ 20 ಲೀಟರ್ ಡೀಸೆಲ್ ಬಳಕೆಯೊಂದಿಗೆ ಶಿವಾಲಿಕ್ ಬೆಟ್ಟಗಳ ಮೂಲಕ 13 ಕಿಮೀ ದೂರವನ್ನು ಕ್ರಮಿಸುತ್ತದೆ. ಪ್ರತಿದಿನ 800 ಪ್ರಯಾಣಿಕರು ಈ ರೈಲಿನಲ್ಲಿ ತೆರಳುತ್ತಾರೆ. ಪ್ರಯಾಣದ ಮಾರ್ಗದಲ್ಲಿ ಅನೇಕ ಸಣ್ಣ ಹಳ್ಳಿಗಳಿವೆ. ನೌಕರರು, ಪ್ರವಾಸಿಗರು, ಶಾಲಾ ವಿದ್ಯಾರ್ಥಿಗಳಿಗೂ ಈ ರೈಲಿನಿಂದ ಅನುಕೂಲವಾಗಿದೆ. ಈ ರೈಲು ಡೀಸೆಲ್ ಎಂಜಿನ್‌ನಲ್ಲಿ ಚಲಿಸುತ್ತದೆ. ದಿನಕ್ಕೆ 50 ಲೀಟರ್ ಡೀಸೆಲ್ ಬಳಕೆಯಾಗುತ್ತದೆ. ಅದರ ಇಂಜಿನ್ ಒಮ್ಮೆ ಸ್ಟಾರ್ಟ್ ಆದರೆ ಭಾಕ್ರಾದಿಂದ ಹಿಂತಿರುಗಿದ ನಂತರವೇ ಆಫ್ ಆಗಬೇಕು, ಅಲ್ಲಿವರೆಗೂ ಅದನ್ನು ಆಫ್‌ ಮಾಡುವುದಿಲ್ಲ.

ರೈಲಿನೊಳಗೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಮರದ ಬೆಂಚುಗಳೂ ಇವೆ. ಈ ರೈಲಿನ ಮೂಲಕ ಸಮೀಪದ ಗ್ರಾಮಗಳಾದ ಭಾಕ್ರಾ, ಬರ್ಮಾಲಾ, ಒಲಿಂದಾ, ನೆಹ್ಲಾ, ಭಾಕ್ರಾ, ಹಂಡೋಲಾ, ಸ್ವಾಮಿಪುರ, ಖೇಡಾ ಬಾಗ್, ಕಲಾಕುಂಡ್, ನಂಗಲ್, ಸಾಲಂಗಡಿ, ಲಿಡ್ಕೋಟ್, ಜಗತ್ಖಾನ, ಪರೋಯ್ಯಾ, ಚುಗತಿ, ತಲವಾರ, ಗೋಲ್ತೈ ಗ್ರಾಮಗಳ ಜನರು ಇಲ್ಲಿಗೆ ಬರ್ತಾರೆ.

ರೈಲಿನ ಸಮಯ

ಈ ರೈಲು ಬೆಳಿಗ್ಗೆ 7:05 ಕ್ಕೆ ನಂಗಲ್‌ನಿಂದ ಹೊರಡುತ್ತದೆ. ಸುಮಾರು 8:20ಕ್ಕೆ ಈ ರೈಲು ಭಾಕ್ರಾದಿಂದ ನಂಗಲ್ ಕಡೆಗೆ ಹಿಂತಿರುಗುತ್ತದೆ. ಮತ್ತೊಮ್ಮೆ ಮಧ್ಯಾಹ್ನ 3:05 ಕ್ಕೆ ನಂಗಲ್‌ನಿಂದ ಹೊರಟು ಸಂಜೆ 4:20ಕ್ಕೆ ಭಾಕ್ರಾ ಅಣೆಕಟ್ಟಿನಿಂದ ನಂಗಲ್‌ಗೆ ಹಿಂತಿರುಗುತ್ತದೆ. ನಂಗಲ್ ನಿಂದ ಭಾಕ್ರಾ ಅಣೆಕಟ್ಟು ತಲುಪಲು 40 ನಿಮಿಷಗಳು ಬೇಕು. ರೈಲು ಆರಂಭವಾದಾಗ 10 ಬೋಗಿಗಳಿದ್ದವು. ಆದ್ರೆ ಈಗ ಕೇವಲ 3 ಬೋಗಿಗಳಿವೆ. ಈ ರೈಲಿನಲ್ಲಿ ಒಂದು ಬೋಗಿಯನ್ನು ಪ್ರವಾಸಿಗರಿಗೆ ಮತ್ತು ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...