ಪತ್ರಕರ್ತರಾಗುವುದು ಸುಲಭದ ಮಾತಲ್ಲ. ಕೆಲವೊಮ್ಮೆ ಯಾರ್ಯಾರನ್ನೊ ಸಂದರ್ಶನ ಮಾಡಲು ಹೋಗಿ ಒಂದೋ ಅವರನ್ನು ಪೇಚಿಗೆ ಸಿಲುಕಿಸುತ್ತಾರೆ, ಇಲ್ಲವೇ ತಾವು ಪೇಚಿಗೆ ಸಿಲುಕುತ್ತಾರೆ. ತಲೆಯ ಮೇಲೆ ಹುಲ್ಲು ಹೊತ್ತು ಹೋಗುವ ವ್ಯಕ್ತಿಯೊಬ್ಬನ ಸಂದರ್ಶನ ಮಾಡಲು ಹೋದ ಪತ್ರಕರ್ತನೊಬ್ಬ ಆತನನ್ನು ಬೀಳಿಸಿರುವ ವಿಡಿಯೋ ಒಂದು ವೈರಲ್ ಆಗಿದೆ.
ವ್ಯಕ್ತಿಯೊಬ್ಬ ತಲೆ ಮತ್ತು ಬೆನ್ನಿನ ಮೇಲೆ ಭಾರವಾದ ಹುಲ್ಲನ್ನು ಹೊತ್ತುಕೊಂಡು ಬರುತ್ತಿದ್ದ. ಆತನನ್ನು ಪ್ರಶ್ನಿಸಲು ಪತ್ರಕರ್ತ ಮುಂದಾಗಿದ್ದಾನೆ. ಹಲೋ, ಹೇಗಿದ್ದೀರಾ ಎಂದು ಆ ವ್ಯಕ್ತಿಯ ಮೈಯನ್ನು ಮುಟ್ಟಿದ್ದಾನೆ. ಆದರೆ ಅದಾಗಲೇ ತುಂಬಾ ಭಾರವಾದ ಹೊರೆಯನ್ನು ಆ ವ್ಯಕ್ತಿ ಹೊತ್ತಿದ್ದರಿಂದ ಪತ್ರಕರ್ತ ತಟ್ಟಿದಾಗ ಆತ ಹೊರೆಯ ಸಹಿತ ಬಿದ್ದಿದ್ದಾನೆ.
ನದಿಯ ಮೂಲೆಯಲ್ಲಿ ವ್ಯಕ್ತಿ ಉರುಳಿ ಹೋಗಿದ್ದಾನೆ. ಅಸಲಿಗೆ ಇದು ಒಂದು ದುರದೃಷ್ಟಕರ ಘಟನೆ. ಹೀಗೆ ಬಿದ್ದ ವ್ಯಕ್ತಿಗೆ ಏನಾದರೂ ಆಗಬಹುದಿತ್ತು. ಆದರೆ ಈ ವಿಡಿಯೋ ಅನ್ನು ಹಾಸ್ಯದ ರೂಪದಲ್ಲಿ, ಹಿನ್ನೆಲೆಯಲ್ಲಿ ನಗುವ ಮೂಲಕ ವಿಡಿಯೋ ವೈರಲ್ ಆಗಿದ್ದು, ಇದು ಹಲವು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಕೆಲವರು ಮಾತ್ರ ಇದೊಂದು ರೀತಿಯಲ್ಲಿ ಮಜವಾಗಿದೆ ಎಂದು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.