alex Certify ಬಕೆಟ್​ನಿಂದಲೇ ವಾದ್ಯ: ಬೀದಿ ಬದಿ ಕಲಾವಿದನ ಕಲೆಗೆ ಮನಸೋಲದವರೇ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಕೆಟ್​ನಿಂದಲೇ ವಾದ್ಯ: ಬೀದಿ ಬದಿ ಕಲಾವಿದನ ಕಲೆಗೆ ಮನಸೋಲದವರೇ ಇಲ್ಲ

ಒಂದು ಪ್ರಸಿದ್ಧವಾದ ಮಾತಿದೆ, ಸಂಕಲ್ಪವಿದ್ದರೆ ಮಾರ್ಗವಿದೆ. ಪ್ರಪಂಚದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಚಿತ್ರಕಲೆ, ಸಂಗೀತ, ಹಾಡುಗಾರಿಕೆ, ನೃತ್ಯ ಅಥವಾ ಹಾಸ್ಯ ಯಾವುದೇ ಇರಲಿ ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಜಾಲತಾಣದ ಒಂದು ವೇದಿಕೆಯಾಗಿದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಬೀದಿ ಬದಿಯಲ್ಲಿ ಬಕೆಟ್ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬ ತನ್ನ ಮುಂದೆ ವಿವಿಧ ಗಾತ್ರದ ಹಲವಾರು ಖಾಲಿ ಬಕೆಟ್‌ಗಳನ್ನು ಇಟ್ಟುಕೊಂಡು, ಕೈಯಲ್ಲಿ ಡ್ರಮ್‌ಸ್ಟಿಕ್‌ ಹಿಡಿದುಕೊಂಡು ವಾದ್ಯ ನುಡಿಸುತ್ತಿರುವ ವಿಡಿಯೋ ಇದಾಗಿದೆ. ಅಲ್ಲಿ ಇರುವುದು ಕೇವಲ ಬಕೆಟ್​ ಆದರೂ ಯಾವುದೇ ದುಬಾರಿ ವಾದ್ಯಕ್ಕೆ ಕಡಿಮೆ ಇಲ್ಲದಂತೆಯೇ ಸಂಗೀತ ಮೊಳಗಿಸುವ ವಿಡಿಯೋ ಇದಾಗಿದ್ದು, ಲಕ್ಷಾಂತರ ಮಂದಿ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜುಗಾಡ್ ಡ್ರಮ್ಸ್ ಮತ್ತು ಲವಲವಿಕೆಯ ಸಂಗೀತವು ಇಂಟರ್​ನೆಟ್​ ಬಳಕೆದಾರರನ್ನು ಬೆರಗುಗೊಳಿಸಿದೆ. ಮನಸ್ಸೊಂದಿದ್ದರೆ ಮಾರ್ಗ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಇಲ್ಲ ಎಂದು ಹಲವು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. “ಈ ಕಲಾವಿದನಿಗೆ ಡ್ರಮ್ ಕಿಟ್ ಅಗತ್ಯವಿಲ್ಲ. ಡ್ರಮ್ ಕಿಟ್‌ಗೆ ಅವನ ಅಗತ್ಯವಿದೆ, ಅಷ್ಟು ಸುಂದರವಾಗಿ ಈತ ನುಡಿಸುತ್ತಿದ್ದಾನೆ” ಎಂದು ಹಲವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...