ಸತತ ಸೋಲಿನಿಂದ ಪಾಯಿಂಟ್ ಟೇಬಲ್ ನಲ್ಲಿ ಕೆಳಗಿಳಿದಿರುವ ಯುಪಿ ಯೋಧಾಸ್ ಹಾಗೂ ಹರ್ಯಾಣ ಸ್ಟೀಲರ್ಸ್ ಇಂದು ಮುಖಾಮುಖಿಯಾಗಲಿದ್ದು, ಎರಡೂ ತಂಡಗಳು ಜಯದ ಹುಡುಕಾಟದಲ್ಲಿವೆ.
ಅಂಕಪಟ್ಟಿಯಲ್ಲಿ ಯುಪಿ ಯೋಧಾಸ್ 10 ನೇ ಸ್ಥಾನದಲ್ಲಿದ್ದರೆ ಹರ್ಯಾಣ ಸ್ಟೀಲರ್ಸ್ 11ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಈ ಪಂದ್ಯದ ಬಳಿಕ ಪುಣೇರಿ ಪಲ್ಟಾನ್ ಹಾಗೂ ಯು ಮುಂಬಾ ಸೆಣಸಾಡಲಿವೆ.
ಈ ಬಾರಿಯ ವಿವೋ ಪ್ರೊ ಕಬಡ್ಡಿಯ ಪಂದ್ಯಗಳು ಸಾಕಷ್ಟು ರೋಚಕತೆಯಿಂದ ಸಾಗುತ್ತಿದೆ. ಯುಪಿ ಯೋಧಾಸ್ ತಂಡದಲ್ಲಿನ ರೆಕಾರ್ಡ್ ಬ್ರೇಕರ್ ಪ್ರದೀಪ್ ನರ್ವಾಲ್ ಹಾಗೂ ಸುರೇಂದರ್ ಗಿಲ್ ಬಲಿಷ್ಠ ರೈಡರ್ ಗಳಾಗಿದ್ದು ಸುಮಿತ್ ಉತ್ತಮ ಡಿಫೆಂಡರ್ ಆಗಿದ್ದಾರೆ. ಇನ್ನು ಹರ್ಯಾಣ ಸ್ಟೀಲರ್ಸ್ ತಂಡಕ್ಕೆ ಮಂಜೀತ್ ಹಾಗೂ ಮಹೇಂದರ್ ಅವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ.
ವಿವೋ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಪುಣೇರಿ ಪಲ್ಟಾನ್ ಮೊದಲನೇ ಸ್ಥಾನದಲ್ಲಿದ್ದರೆ ನಮ್ಮ ಬೆಂಗಳೂರು ಬುಲ್ಸ್ ಎರಡನೇ ಸ್ಥಾನದಲ್ಲಿದೆ.