ಎಷ್ಟೋ ಪುರುಷರು ಖಾಸಗಿ ಕ್ಷಣಗಳಲ್ಲಿ ತ್ರಾಣವಿಲ್ಲದೆ ಕಷ್ಟಪಡುತ್ತಾರೆ. ಇದು ಅವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದಾಂಪತ್ಯವೇ ಮುರಿದು ಬೀಳುವ ಸಾಧ್ಯತೆ ಇರುತ್ತದೆ.
ಪುರುಷರ ತ್ರಾಣವನ್ನು ಬಲಪಡಿಸುವಂತಹ ಖಚಿತವಾದ ಮಾರ್ಗದ ಬಗ್ಗೆ ತಿಳಿಯೋಣ. ಈ ಪರಿಹಾರವು ಆಯುರ್ವೇದದ ಮೂಲಿಕೆ ವೈಟ್ ಮುಸ್ಲಿಗೆ ಸಂಬಂಧಿಸಿದ್ದು. ಈ ಗಿಡಮೂಲಿಕೆಯ ಬಳಕೆಯಿಂದಾಗಿ ಅನೇಕ ಸಂಸಾರಗಳು ಬಚಾವ್ ಆಗಿವೆ.
ಸಫೇದ್ ಮುಸ್ಲಿಯನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಎಂಟಿ ಒಕ್ಸಿಡೆಂಟ್ ಮತ್ತು ಉರಿಯೂತದಂತಹ ನೈಸರ್ಗಿಕ ಗುಣಗಳನ್ನು ಹೊಂದಿದೆ. ಸಫೇದ್ ಮುಸ್ಲಿ ಬೀಜಗಳು ಮತ್ತು ಬೇರುಗಳನ್ನು ಸಾಮಾನ್ಯವಾಗಿ ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಸಫೇದ್ ಮುಸ್ಲಿ ಸೇವನೆಯು ಪುರುಷರಲ್ಲಿನ ಶಕ್ತಿಹೀನತೆಯನ್ನು ಹೋಗಲಾಡಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಇದರ ಜೊತೆಗೆ ಮಧುಮೇಹ, ಕ್ಯಾನ್ಸರ್, ಸಂಧಿವಾತ ಮತ್ತು ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ.
ವೈಯಕ್ತಿಕ ಕ್ಷಣಗಳಲ್ಲಿ ಪುರುಷರು ತ್ರಾಣದ ಕೊರತೆಯಿಂದ ಬಳಲುತ್ತಿದ್ದರೆ, ಲೈಂಗಿಕ ಸಂಬಂಧಕ್ಕೆ ತೊಂದರೆಯಾಗುತ್ತಿದ್ದರೆ ಸಫೇದ್ ಮುಸ್ಲಿ ಅವರ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಕ್ಕಾಗಿ ಸಫೇದ್ ಮುಸ್ಲಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬೇಕು. ಹೀಗೆ ಮಾಡುವುದರಿಂದ ಪುರುಷರಲ್ಲಿನ ಲೈಂಗಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಅವರ ಬಯಕೆ ಮೊದಲಿಗಿಂತ ಹೆಚ್ಚುತ್ತದೆ.
ಸಫೇದ್ ಮುಸ್ಲಿಯ ಪಾನೀಯ ತಯಾರಿಸಲು ಒಂದು ಲೋಟ ಹಾಲು ತೆಗೆದುಕೊಳ್ಳಿ. ಹಾಲನ್ನು ಸಣ್ಣ ಪಾತ್ರೆಯಲ್ಲಿ ಕುದಿಸಿ. ಹಾಲು ಚೆನ್ನಾಗಿ ಬಿಸಿಯಾದಾಗ ಕೆಳಗಿಳಿಸಿ, ಅದಕ್ಕೆ ಒಂದು ಚಮಚ ಸಫೇದ್ ಮುಸ್ಲಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಕಲಕಿ, ಕೊಂಚ ತಣ್ಣಗಾದ ಬಳಿಕ ಇದನ್ನು ಕುಡಿಯಿರಿ. ನಿಯಮಿತವಾಗಿ ಒಂದು ವಾರ ಈ ಪಾನೀಯವನ್ನು ಕುಡಿಯುತ್ತ ಬಂದರೆ ಲೈಂಗಿಕ ಸಂಬಂಧದ ವೇಳೆ ನಿತ್ರಾಣ ಕಾಡುವುದಿಲ್ಲ ಜೊತೆಗೆ ಉತ್ಸಾಹವೂ ಹೆಚ್ಚುತ್ತದೆ.