ಈ ಯಾಂತ್ರಿಕತೆಯ ಬದುಕಿನಲ್ಲಿ ಆಗಾಗ್ಗೆ ಕುಟುಂಬದಲ್ಲಿ ನಡೆಯುವ ಚಿಕ್ಕಪುಟ್ಟ ತಮಾಷೆಗಳು ಜೀವನದಲ್ಲಿ ಖುಷಿ ಕೊಡುತ್ತವೆ. ಅದು ಈಗಿನ ಅಗತ್ಯ ಕೂಡ ಹೌದು. ಚಿಕ್ಕಮಕ್ಕಳಿದ್ದರೆ ಮನೆಯಲ್ಲಿ ಅದುವೇ ಸೊಗಸು. ಆದರೆ ಹಲವು ಕುಟುಂಬಗಳಲ್ಲಿ ಚಿಕ್ಕಮಕ್ಕಳು ಸ್ಮಾರ್ಟ್ಫೋನ್ನಿಂದಾಗಿ ಉಳಿದ ಖುಷಿಗಳಿಂದ ದೂರು ಉಳಿದಿದ್ದರೆ, ಇನ್ನು ಅಪ್ಪ-ಅಮ್ಮನೂ ಮಕ್ಕಳನ್ನು ನೋಡಿಕೊಳ್ಳುವ ಪುರುಸೊತ್ತು ಇಲ್ಲದೇ ದಿನ ಕಳೆಯುತ್ತಾರೆ.
ಇವುಗಳ ನಡುವೆ ಈಗ ವೈರಲ್ ಆಗಿರುವ ಅಪ್ಪ-ಮಗಳ ಕ್ಯೂಟ್ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಇಂಥ ತಮಾಷೆ, ಹಾಸ್ಯ ಆಗಾಗ್ಗೆ ಮನೆಯಲ್ಲಿ ನಡೆಯುತ್ತಿದ್ದರೆ ಚೆನ್ನ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಇದರಲ್ಲಿ ಮಗಳು ತಂದೆಗೆ ತಮಾಷೆ ಮಾಡುವುದನ್ನು ನೋಡಬಹುದು. ಯಾವುದೋ ಒಂದು ಸವಾಲನ್ನು ಮಗಳು ಅಪ್ಪನಿಗೆ ನೀಡುತ್ತಾಳೆ. ಅಡುಗೆ ಮನೆಗೆ ಅಪ್ಪನನ್ನು ಆಹ್ವಾನಿಸುವ ಪುಟ್ಟ ಬಾಲಕಿ, ಅಪ್ಪನ ಕೈಗೆ ಹಗ್ಗ ಕಟ್ಟಿ ಎರಡು ಜಗ್ಗಳನ್ನು ತೂಗಿಬಿಡುತ್ತಾಳೆ. ನಂತರ ನೀವೆಷ್ಟು ಭಾರ ಹೊತ್ತುಕೊಳ್ಳಲು ಸಾಧ್ಯ ಎಂದು ಕೇಳುತ್ತಾ ಅಪ್ಪನ ಕೈಗಳ ಮೇಲೆ ಪುಸ್ತಕಗಳನ್ನು ಇಡುತ್ತಾ ಹೋಗುತ್ತಾಳೆ.
ಕೊನೆಯಲ್ಲಿ ಕೇಕ್ ಇಡುತ್ತಾಳೆ. ನಂತರ ನಿಧಾನವಾಗಿ ಕತ್ತರಿಯಿಂದ ಹಗ್ಗವನ್ನು ಕಟ್ ಮಾಡಿದಾಗ ಮೇಲಿರುವ ಕೇಕ್ ಅಪ್ಪನ ಮುಖಕ್ಕೆ ಅಪ್ಪಳಿಸಿ ಅಪ್ಪನ ಮುಖ ಕೇಕ್ಮಯವಾಗುತ್ತದೆ. ಈ ಸಂದರ್ಭದಲ್ಲಿ ಏನಾಯಿತೆಂದು ತಿಳಿಯದ ಅಪ್ಪ ಅಲ್ಲಿಯೇ ಆಯತಪ್ಪಿ ಬೀಳುತ್ತಾರೆ.
ಮಗಳು ಈ ಹಾಸ್ಯದ ತುಣುಕಿಗೆ ಹಲವು ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.