ಗೋವಾ: ಕ್ರಿಕೆಟ್ ಲೋಕದ ಅಪೂರ್ವ ತಾರೆ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಗೋವಾದಲ್ಲಿ ಮೀನುಗಾರನೊಬ್ಬನ ಜತೆ ಕಾಲ ಕಳೆದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಗೋವಾದ ಕಾರಂಜೆಲಮ್ ಬೀಚ್‌ನಲ್ಲಿ ಕಾಲ ಕಳೆದ ಸಚಿನ್ ತೆಂಡೂಲ್ಕರ್, ಪೀಲೆ ಎಂಬ ಮೀನುಗಾರನೊಂದಿಗೆ ಸಾಂಪ್ರದಾಯಿಕ ಮೀನುಗಾರಿಕೆಯ ಬಗ್ಗೆ ಮಾತನಾಡುತ್ತಿರುವುದನ್ನು ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ನೋಡಬಹುದು. ಮಾತ್ರವಲ್ಲದೇ ಸಮುದ್ರದಿಂದ ದೋಣಿಯನ್ನು ಹೊರತೆಗೆಯುವುದಕ್ಕೂ ಮೀನುಗಾರನಿಗೆ ಸಹಾಯ ಮಾಡುವುದು ವಿಡಿಯೋದಲ್ಲಿ ದಾಖಲಾಗಿದೆ.
ಸಚಿನ್ ಜೊತೆಗೆ ಮಾತನಾಡುತ್ತಾ ಮೀನುಗಾರ, ‘‘ನಾನು ಮತ್ತು ನನ್ನ ಅಣ್ಣ ಮೀನುಗಾರಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಈಗಿನ ಪೀಳಿಗೆಯೂ ಸಹ ಇದನ್ನು ನೆಚ್ಚಿಕೊಳ್ಳಬೇಕು ಎಂಬುದು ನನ್ನ ಆಸೆ” ಎಂದಿದ್ದಾರೆ.
ಲಕ್ಷಾಂತರ ಜನರು ಗೋವಾಗೆ ಬಂದು ಸಮುದ್ರದ ತಿನಿಸುಗಳನ್ನು ಮೀನುಗಳನ್ನು ಸೇವಿಸಿ ಆನಂದಿಸುತ್ತಾರೆ. ಅದರೆ ಮೀನು ಹಿಡಿಯುವುದು ಎಷ್ಟು ಕಷ್ಟ ಎಂಬುದು ಅನೇಕರಿಗೆ ತಿಳಿದಿಲ್ಲ ಎಂದು ಮೀನುಗಾರ ಪೀಲೆ ಹೇಳಿದರು.
‘‘ನಾನು ಭೂಮಿಯ ಮೇಲಿನ ಅತ್ಯಂತ ಸಂತೋಷದ ಮನುಷ್ಯ. ಜಗತ್ತಿನ ನಂ.1 ಕ್ರಿಕೆಟಿಗನೊಂದಿಗೆ ಸಂವಹನ ಬೆಳೆಸಿ ನಾನು ತುಂಬಾ ಶ್ರೀಮಂತನಾದೆ” ಎಂದು ಪೀಲೆ ಹೇಳಿದರು. ಇದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದು ಸಚಿನ್ ಹೇಳಿಕೊಂಡಿದ್ದಾರೆ.