alex Certify ‘ಫಿಶ್ ಕರಿ’ ತಯಾರಿಸುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫಿಶ್ ಕರಿ’ ತಯಾರಿಸುವ ವಿಧಾನ

Chettinad Fish Stew | South Indian Chettinad Fish Gravy | How to make  Chettinad Fish Curry | Vismai Foodನಾನ್ ವೆಜ್ ಪ್ರಿಯರಿಗೆ ಚೈನೀಸ್ ಫುಡ್ ಎಂದರೆ ಬಲು ಇಷ್ಟ. ನೆನಪಿಸಿಕೊಂಡ ಕೂಡಲೇ ಬಾಯಲ್ಲಿ ನೀರು ತರಿಸುವ ಚೈನೀಸ್ ಫಿಶ್ ಕರಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

6-7 ಮೀನಿನ ತುಂಡುಗಳು, 1 ಮೊಟ್ಟೆ, 2 ಟೀ ಸ್ಪೂನ್ ಜೋಳದ ಹಿಟ್ಟು, ಒಂದೂವರೆ ಟೀ ಸ್ಪೂನ್ ರುಬ್ಬಿದ ಶುಂಠಿ, ಬೆಳ್ಳುಳ್ಳಿ, ಅರ್ಧ ಟೀ ಸ್ಪೂನ್ ಅಜಿನೊಮೊಟೊ ಹಾಗೂ ಅಗತ್ಯಕ್ಕೆ ತಕ್ಕಷ್ಟು ಎಣ್ಣೆ.

ಕರಿಗೆ ಬೇಕಾಗುವ ಸಾಮಗ್ರಿಗಳು:

2 ಈರುಳ್ಳಿ ಕತ್ತರಿಸಿದ್ದು, 3 ಟೀ ಸ್ಪೂನ್ ಎಣ್ಣೆ, 3 ಟೀ ಸ್ಪೂನ್ ರುಬ್ಬಿದ ಶುಂಠಿ, ಬೆಳ್ಳುಳ್ಳಿ, ತಲಾ ಒಂದೂವರೆ ಟೀ ಸ್ಪೂನ್ ನಷ್ಟು ಟೊಮ್ಯಾಟೊ ಸಾಸ್, ಸೋಯಾ ಸಾಸ್, ಕೆಂಪು ಮೆಣಸಿನ ಕಾಯಿ ಪುಡಿ, ಜೋಳದ ಹಿಟ್ಟು, ಚಿಲ್ಲಿ ಸಾಸ್, ಗರಮ್ ಮಸಾಲ, ತಲಾ ¼ ಟೀ ಸ್ಪೂನ್ ನಷ್ಟು ಅಜಿನೊಮೊಟೊ, ಸಕ್ಕರೆ, ಹಾಗೂ ಅರ್ಧ ಟೀ ಸ್ಪೂನ್ ನಷ್ಟು ಉಪ್ಪು.

ತಯಾರಿಸುವ ವಿಧಾನ:

ಮೊದಲಿಗೆ 2 ಟೀ ಸ್ಪೂನ್ ನಷ್ಟು ಕಾರ್ನ್ ಪ್ಲೋರ್ ಮತ್ತು ಮೊಟ್ಟೆಯ ಬಿಳಿ ಭಾಗ, ಒಂದೂವರೆ ಟೀ ಸ್ಪೂನ್ ರುಬ್ಬಿದ ಶುಂಠಿ, ಬೆಳ್ಳುಳ್ಳಿ ಮತ್ತು ¼ ಟೀ ಸ್ಪೂನ್ ಅಜಿನೊಮೊಟೊವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿರಿ.

ಈ ಮಿಶ್ರಣದಲ್ಲಿ ಮೀನಿನ ತುಂಡುಗಳನ್ನು ಹಾಕಿ, ಮಿಶ್ರಣ ತುಂಡುಗಳಿಗೆ ಮೆತ್ತಿಕೊಳ್ಳುವಂತೆ ಮಾಡಿ. ಬಳಿಕ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿಯಿರಿ.

ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನ ಕಾಯಿ ಮತ್ತು 3 ಟೀ ಸ್ಪೂನ್ ರುಬ್ಬಿದ ಶುಂಠಿ, ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಕೆಂಪಗೆ ಹುರಿಯಿರಿ.

ಅದಕ್ಕೆ ಉಪ್ಪು, ಮೆಣಸಿನ ಪುಡಿ, ಗರಮ್ ಮಸಾಲಾ ಪುಡಿ, ಸಕ್ಕರೆ ಬೆರೆಸಿ ಅರ್ಧ ಕಪ್ ನೀರು ಹಾಕಿ ಕೆಲವು ನಿಮಿಷಗಳ ಕಾಲ ಕುದಿಸಿರಿ.

ಬಳಿಕ ಜೋಳದ ಹಿಟ್ಟನ್ನು ನೀರಿನಲ್ಲಿ ಕಲೆಸಿ ಸೇರಿಸಿರಿ. ಕರಿ ಚೆನ್ನಾಗಿ ಕುದಿಯುವಾಗ ಅದಕ್ಕೆ ಸಾಸ್, ಅಜಿನೊಮೊಟೊ ಬೆರೆಸಿರಿ. 2-3 ನಿಮಿಷಗಳ ಕಾಲ ಕುದಿಸಿ ಮೊದಲೇ ಕೆಂಪಗೆ ಕರಿದ ಮೀನಿನ ತುಂಡುಗಳನ್ನು ಹಾಕಿ 3 ನಿಮಿಷ ಬೇಯಿಸಿ ಕೆಳಗೆ ಇಳಿಸಿ. ಸ್ವಾದಿಷ್ಟವಾದ ಚೈನೀಸ್ ಫಿಶ್ ಕರಿಯನ್ನು ಸವಿಯಿರಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...