alex Certify ಬಿಡುಗಡೆಗೂ ಮುನ್ನವೇ ವಿವಾದದಲ್ಲಿ ʼದಿ ಕೇರಳ ಸ್ಟೋರಿʼ ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಗೂ ಮುನ್ನವೇ ವಿವಾದದಲ್ಲಿ ʼದಿ ಕೇರಳ ಸ್ಟೋರಿʼ ..!

ತಿರುವನಂತಪುರಂ: ಸದ್ಯ ʼದಿ ಕೇರಳ ಸ್ಟೋರಿʼ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದಾಗಿನಿಂದಲೂ​ ಸಖತ್​ ವೈರಲ್​ ಆಗೋದ್ರ ಜೊತೆಗೆ ಒಂದಿಷ್ಟು ಜನರ ವಿರೋಧಕ್ಕೂ ಕಾರಣವಾಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ ಈ ಟೀಸರ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಹೌದು, ಕೇರಳದಲ್ಲಿ 32 ಸಾವಿರ ಹುಡುಗಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಹಾಗೂ ಅವರನ್ನು ವಿದೇಶಕ್ಕೆ ಕಳಿಸಿ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಸಂಭಾಷಣೆ ಇದೀಗ ವಿರೋಧಕ್ಕೆ ಕಾರಣವಾಗಿದೆ.

ಹೀಗಾಗಿ ಈ ಸಿನಿಮಾ ಬಿಡುಗಡೆ ಮಾಡಬಾರದು ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್‌ ಒತ್ತಾಯಿಸಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಕೇರಳ ಪೊಲೀಸ್​ ಮಹಾ ನಿರ್ದೇಶಕ ಅನಿಲ್​ ಕಾಂತ್​ ಆದೇಶಿಸಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಖ್ಯಾತ ನಟಿ ಅದಾ ಶರ್ಮಾ ನಟಿಸಿದ್ದಾರೆ. ಅಮೃತ ಲಾಲ್ ಶಾ ʼದಿ ಕೇರಳ ಸ್ಟೋರಿʼ ನಿರ್ಮಾಣ ಮಾಡಿದ್ದಾರೆ. ಸದ್ಯ ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಟೀಸರ್ ಮೂಲಕವೇ ವಿವಾದ ಸೃಷ್ಟಿ ಮಾಡಿರುವ ಈ ಸಿನಿಮಾ ಬಿಡುಗಡೆ ವೇಳೆ ಇನ್ನೆಷ್ಟು ವಿವಾದ ಎಬ್ಬಿಸುತ್ತೋ ಗೊತ್ತಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...