ಬುಂದೇಲ್‌ಖಂಡ್ (ಉತ್ತರ ಪ್ರದೇಶ): ಶಾಲೆ, ಕಾಲೇಜುಗಳಿಗೆ ರಜೆ ಹಾಕುವಾಗ ರಜೆ ಚೀಟಿ ಕೊಡುವುದು ಎಲ್ಲರಿಗೂ ತಿಳಿದದ್ದೇ. ಕೆಲವೊಂದು ಸುಳ್ಳು ಹೇಳಿಯೂ ಕೊಡುವುದಿದೆ. ಆದರೆ ಇಲ್ಲೊಬ್ಬ ಶಾಲಾ ವಿದ್ಯಾರ್ಥಿ ನೀಡಿರುವ ರಜೆ ಚೀಟಿ ಮಾತ್ರ ಭಾರಿ ವೈರಲ್ ಆಗಿದೆ. ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ ಅರ್ಪಿತ್ ವರ್ಮಾ ಅವರು ಹಳೆಯ ರಜೆ ಚೀಟಿಯೊಂದನ್ನು ಪುನಃ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ಬುಂದೇಲ್‌ಖಂಡ್ ಮೂಲದ ವಿದ್ಯಾರ್ಥಿಯೊಬ್ಬ ಬುಂದೇಲಿ ಭಾಷೆಯಲ್ಲಿ ಪತ್ರ ಬರೆದಿದ್ದಾನೆ. ಈತ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು, ಜ್ವರದ ಹಿನ್ನೆಲೆಯಲ್ಲಿ ತನಗೆ ರಜೆ ನೀಡುವಂತೆ ಕೋರಿಕೊಂಡಿದ್ದಾನೆ. ಈತ ಬರೆದ ರೀತಿ ಹಾಗೂ ಸ್ಟೈಲ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ನಾನು ಕೂಡ ಇದನ್ನೇ ಕಾಪಿ ಮಾಡುವೆ ಎಂದು ಅನೇಕ ಮಂದಿ ಹೇಳುತ್ತಿದ್ದಾರೆ.
ಅಷ್ಟಕ್ಕೂ ಕಲುವಾ ಎಂಬ ಹೈಸ್ಕೂಲ್ ವಿದ್ಯಾರ್ಥಿ ಬರೆದದ್ದು ಏನೆಂದರೆ: “ಮಹಾನುಭವ, ತೋ ಮಾಸಾಹೇಬ್ ಎಸೋ ಹೈ ಕಿ ದೋ ದಿನ್ ಸೆ ಚಾದ್ ರಹೋ ಹೈ ಜೋ ಬೋಖರ್ ಔರ್ ಉಪರ್ ಸೆ ನಾಕ್ ಬೆಹ್ ರಹೀ ಸೂ ಅಲಗ್. ಜೇ ಕೆ ಮಾರೆ ಹಮ್ ಸ್ಕೂಲ್ ನ್ಹಿ ಆ ಪಾಯೆ, ಸೂ ತಮ್ಹೈ ಪಾವೊ ಪಿಆರ್ ಕೆ ನಿವೇದನ್ ಆಹೆ ಕಿ ದೋ-ತೀನ್ ದಿನ್ ಕಿ ಚುಟಿ ದೇ ದೇತೆ, ತೋ ಬಡೋ ಆಚೋ ರೆಹತೋ ಅಗರ್ ಹಮ್ ನ್ಹಿ ಆಯೆ ತೋ ಕೋನ್ ಸೋ ತಮ್ಹೋ ಸ್ಕೂಲ್ ಬಂದ್ ಹೋ ಜೇ. ತಮ್ಹೋ ಆಜ್ಞಾಕಾರಿ ಶಿಶೇ, ಕಲುವಾ (ಅಂದರೆ, ಪ್ರೀತಿಯ ಸಾರ್, ಕಳೆದ ಎರಡು ದಿನಗಳಿಂದ ನನಗೆ ಜ್ವರ ಬರುತ್ತಿದೆ. ಸಾಲದು ಎಂಬುದಕ್ಕೆ ಮೂಗು ಕೂಡ ಸೋರುತ್ತಿದೆ. ನನಗೆ ಎರಡರಿಂದ ನಾಲ್ಕು ದಿನ ರಜೆ ನೀಡುವಂತೆ ನಾನು ವಿನಂತಿಸುತ್ತೇನೆ. ನಾನು ಇಲ್ಲದಿದ್ದರೂ ಶಾಲೆ ನಡೆಯುತ್ತದೆ, ಅದನ್ನು ಮುಚ್ಚಲಾಗುವುದಿಲ್ಲ, ಇಂತಿ ನಿಮ್ಮ ಪ್ರಾಮಾಣಿಕ – ಕಲುವಾ) ” ಎಂದು ಬರೆದಿದ್ದಾನೆ.