alex Certify ದೀಪಾವಳಿ ನಂತರ ದೆಹಲಿ ಹವಾಮಾನದ ಸ್ಥಿತಿ ಸ್ವಲ್ಪ ಸುಧಾರಣೆ; ಆದರೂ ಬಿಟ್ಟಿಲ್ಲ ಮಾಲಿನ್ಯದ ಭಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ನಂತರ ದೆಹಲಿ ಹವಾಮಾನದ ಸ್ಥಿತಿ ಸ್ವಲ್ಪ ಸುಧಾರಣೆ; ಆದರೂ ಬಿಟ್ಟಿಲ್ಲ ಮಾಲಿನ್ಯದ ಭಯ

ನವದೆಹಲಿ: ದೀಪಾವಳಿಯ ನಂತರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಕುಸಿತವನ್ನು ಕಂಡಿದೆ. ನಗರದ ಮೇಲೆ ದಟ್ಟವಾದ ಹೊಗೆ ಆವರಿಸಿದೆ. ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ಎಂದು ದಾಖಲಾಗಿದೆ. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ನೀಡಿದ ಮಾಹಿತಿಯ ಪ್ರಕಾರ, ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ ನ.8ರ ಮಂಗಳವಾರ ಬೆಳಗ್ಗೆ 321 ರಷ್ಟಿದೆ. ಇದರ ಹೊರತಾಗಿಯೂ ಇದು ಹಿಂದಿನ ದಿನಕ್ಕಿಂತ ಸ್ವಲ್ಪ ಉತ್ತಮವಾಗಿರುವುದು ಒಳ್ಳೆಯ ಬೆಳವಣಿಗೆ.

@NeecheSeTopper ಮೂಲಕ ಹೋಗುತ್ತಿರುವ ಟ್ವಿಟರ್ ಬಳಕೆದಾರರೊಬ್ಬರು ದೆಹಲಿಯಿಂದ ಸ್ನೇಹಿತರೊಬ್ಬರು ಕಳುಹಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ಹೇಗೆ ಹೊಗೆ ಆವರಿಸಿದ್ದು, ಸಮೀಪದ ನೀರಿನ ಗೋಪುರವೇ ಕಾಣಿಸುತ್ತಿಲ್ಲ ಎಂಬ ದೃಶ್ಯ ಇದಾಗಿದ್ದು, ವಾಯು ಮಾಲಿನ್ಯದ ಭೀಕರತೆಯನ್ನು ತೆರೆದಿಟ್ಟಿದೆ.

ದೆಹಲಿ ಸರ್ಕಾರವು ಈ ವರ್ಷ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಸಿಡಿಸುವಿಕೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ. ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಿದೆ.‌ ವಾಹನಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮುಂದಿನ ತಿಂಗಳು ಪ್ರಾರಂಭವಾಗಲಿರುವ ‘ರೆಡ್ ಲೈಟ್ ಆನ್ ಗಾಡಿ ಆಫ್’ ಅಭಿಯಾನವನ್ನು ಸಹ ಘೋಷಿಸಲಾಗಿದೆ. ಇದರ ಹೊರತಾಗಿಯೂ ಮಾಲಿನ್ಯ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...