ಕೆಲವರಿಗೆ ಸಾಹಸಮಯ ಕೆಲಸಗಳನ್ನು ಮಾಡಿ ಪ್ರಸಿದ್ಧಿಗೆ ಬರಬೇಕೆಂಬ ಆಸೆ ಇದ್ದರೆ, ಇನ್ನು ಕೆಲವರಿಗೆ ಹೆಚ್ಚೆಚ್ಚು ತಿಂದು ಪ್ರಸಿದ್ಧಿಗೆ ಬರಬೇಕು ಎಂದುಕೊಳ್ಳುತ್ತಾರೆ. ಎರಡನೇ ಸಾಲಿಗೆ ಸೇರಿದವರಲ್ಲಿ ಒಬ್ಬಾತ 31 ವರ್ಷದ ಅಲೆಕ್ಸಾಂಡರ್ ಟೊಮಿನ್ಸ್ಕಿ.
ಈತ 40 ದಿನಗಳಲ್ಲಿ 40 ಸಂಪೂರ್ಣ ರೋಟಿಸ್ಸೆರಿ ಕೋಳಿ ತಿಂದು ಖ್ಯಾತಿ ಗಳಿಸಿದ್ದಾನೆ. ಇದು ಭಾರಿ ಗಾತ್ರದ ಕೋಳಿಯಾಗಿರುವ ಕಾರಣ ಸಹಜವಾಗಿ ಯಾರಿಗೂ ಸಂಪೂರ್ಣ ಚಿಕನ್ ತಿನ್ನುವುದು ಕಷ್ಟ. ಆದರೆ 40 ಚಿಕನ್ ತಿಂದು ಜನರ ಗಮನ ಸೆಳೆದಿದ್ದಾನೆ ಈತ.
ಫಿಲಡೆಲ್ಫಿಯಾ ನಿವಾಸಿಯಾಗಿರುವ ಈತನಿಗೆ ಏನಾದರೂ ದಾಖಲೆ ಮಾಡಬೇಕು ಎನಿಸಿ ಹೀಗೆ ಮಾಡಿದಾನಂತೆ. ಈತ ಬನ್ನಿ ಎಲ್ಲರೂ ಪಕ್ಷಿ ತಿನ್ನಿ ಎನ್ನುವ ಬೋರ್ಡ್ ಹಾಕಿಕೊಂಡು ಜನರ ಗಮನ ಸೆಳೆಯುತ್ತಿದ್ದಾನೆ. ಈತ ವಾಸಿಸುವ ಪಿಯರ್ ಬಳಿ ಸುಳಿದಾಡಿದರೆ ದಿನವೂ ಚಿಕನ್ ಪರಿಮಳ ತಮ್ಮ ಮೂಗಿಗೆ ಬಡಿಯುತ್ತದೆ ಎನ್ನುವ ಜನರು ಈತನ ಮನೆ ಸಮೀಪ ಬರಲು ಉತ್ಸಾಹ ತೋರುತ್ತಿದ್ದಾರಂತೆ.
ಮೊದಲಿಗೆ ಕಷ್ಟಪಟ್ಟು 11 ದಿನ ಈ ಕೋಳಿಯನ್ನು ತಿಂದಾಗ ಸುತ್ತಲಿನ ಜನರು ಆಕರ್ಷಿತರಾಗಿ ಈತನನ್ನು ಹೊಗಳಿದರಂತೆ. ಆದ್ದರಿಂದ ಈ ತಿನ್ನುವಿಕೆಯನ್ನು ಸವಾಲಾಗಿ ಸ್ವೀಕರಿಸಿದ ಈತ ಸದ್ಯ ಸತತವಾಗಿ 40 ದಿನ ತಿಂದಿದ್ದಾನೆ. ದಾಖಲೆ ಮಾಡುವುದು ಈತನ ಆಸೆಯಾಗಿದ್ದು, ಏನಾಗುತ್ತದೆಯೋ ಕಾದು ನೋಡಬೇಕು ಎಂದಿದ್ದಾನೆ.