alex Certify ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಭಾರತ ಸಜ್ಜು: ಲಗಾನ್​ ಚಿತ್ರದೊಂದಿಗೆ ಹೋಲಿಸಿರೋ ಮೀಮ್ಸ್​ಗಳು ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಭಾರತ ಸಜ್ಜು: ಲಗಾನ್​ ಚಿತ್ರದೊಂದಿಗೆ ಹೋಲಿಸಿರೋ ಮೀಮ್ಸ್​ಗಳು ವೈರಲ್​

ಭಾರತವು ಟಿ 20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತದ ಆಟಗಾರರು ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಸೆಮಿ ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಇದೇ 10ರಂದು ಭಾರತವು ಇಂಗ್ಲೆಂಡ್ ವಿರುದ್ಧ ಹೋರಾಡಲು ಸಜ್ಜಾಗಿದೆ.

ಎರಡನೇ ಸೆಮಿಫೈನಲ್ ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಟಗಾರರಂತೆಯೇ ಅಭಿಮಾನಿಗಳಿಗೂ ಆತಂಕ ಸೃಷ್ಟಿಯಾಗಿದ್ದು, ತಮ್ಮ ದೇಶದ ತಂಡ ಜಯ ಸಾಧಿಸಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಪಂದ್ಯದ ಯಶಸ್ವಿಗೆ ಭಾರತದ ಕ್ರಿಕೆಟ್​ ಪ್ರೇಮಿಗಳು ತಮ್ಮದೇ ಆದ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ಕೆಲವರು ಪೋಸ್ಟರ್​ ಮೂಲಕ ವಿಜಯ ಪತಾಕೆ ಹಾರಿಸಿ ಎಂದು ಹುರಿದುಂಬಿಸುತ್ತಿದ್ದಾರೆ.

ಕೆಲವು ನೆಟ್ಟಿಗರು ಈ ಪಂದ್ಯವನ್ನು ಸಾಂಪ್ರದಾಯಿಕ ಚಿತ್ರ ಲಗಾನ್‌ನೊಂದಿಗೆ ಹೋಲಿಸಿ ಮೀಮ್ಸ್​ಗಳನ್ನು ಹರಿಬಿಟ್ಟಿದ್ದಾರೆ. ಆಮೀರ್ ಖಾನ್ ಅಭಿನಯದ ಲಗಾನ್​ ಚಿತ್ರದಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ಕ್ರಿಕೆಟ್ ಪಂದ್ಯವನ್ನು ಆಡಿ, ಮೂರು ವರ್ಷಗಳ ಕಾಲ ತೆರಿಗೆ ಪಾವತಿಯಿಂದ ಮುಕ್ತವಾಗಿಸುವಂತೆ ಕೇಳಿಕೊಂಡಿದ್ದರು. ಈ ಚಿತ್ರಕ್ಕೆ ಈ ಕ್ರಿಕೆಟ್​ ಪಂದ್ಯವನ್ನು ಹೋಲಿಸಿದ್ದು, ಲಗಾನ್​ ಚಿತ್ರದ ಹೋಲಿಕೆಯ ಮೀಮ್ಸ್​ಗಳು ವೈರಲ್​ ಆಗುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...