ನವದೆಹಲಿ: ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಾಧೀಶರಾಗಿ ಡಿ.ವೈ.ಚಂದ್ರಚೂಡ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐ ನ್ಯಾ.ಚಂದ್ರಚೂಡ್ ಅವರಿಗೆ ಪ್ರಮಾಣವಚನ ಬೋಧಿಸಿದರು.
49ನೇ ಸಿಜೆಐ ಆಗಿದ್ದ ಯು.ಯು.ಲಲಿತ್ ಅವರು ನವೆಂಬರ್ 8ರಂದು ಕರ್ತವ್ಯ ಮುಕ್ತಾಯಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ನೂತನ ಸಿಜೆಐ ಆಗಿ ಚಂದ್ರಚೂಡ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. 2024ರ ನವೆಂಬರ್ 10ರವರೆಗೆ ಚಂದ್ರಚೂಡ್ ಅವರ ಸೇವಾವಧಿ ಇರಲಿದೆ.