ನವದೆಹಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಹೆದ್ದಾರಿಯ ಮಧ್ಯದಲ್ಲಿ ಕೆಟ್ಟು ನಿಂತಿದ್ದ ಪ್ರಯಾಣಿಕರ ಬಸ್ ತಳ್ಳಿದ ಘಟನೆ ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬಸ್ ದಾರಿ ಮಧ್ಯದಲ್ಲೇ ಆಫ್ ಆಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದೇ ಮಾರ್ಗವಾಗಿ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ಅನುರಾಗ್ ಠಾಕೂರ್ ಹಳ್ಳಿಯ ಮೂಲಕ ಹಾದುಹೋಗುವ ಕಿರಿದಾದ ರಸ್ತೆಯಲ್ಲಿ ಕೆಟ್ಟುಹೋದ ಪ್ರಯಾಣಿಕರಿಂದ ತುಂಬಿದ ಬಸ್ ನಿಂದ ಉಂಟಾದ ಟ್ರಾಫಿಕ್ ಜಾಮ್ ಗಮನಿಸಿದರು.
ನಂತರ ಸ್ಥಳೀಯರು, ಪ್ರಯಾಣಿಕರೊಂದಿಗೆ ಸೇರಿದ ಅನುರಾಗ್ ಠಾಕೂರ್ ಬಸ್ ತಳ್ಳಿದ್ದಾರೆ. ಬಸ್ ಸ್ಟಾರ್ಟ್ ಆಗಿ ಪ್ರಯಾಣ ಮುಂದುವರೆಸಿದ್ದಾರೆ.
ವಿಡಿಯೋದಲ್ಲಿ ಅನುರಾಗ್ ಠಾಕೂರ್ ಬಸ್ ಚಾಲಕ ಮತ್ತು ಪ್ರಯಾಣಿಕರೊಂದಿಗೆ ಮಾತನಾಡಿದ್ದಾರೆ. ಕಾರ್ ನಿಂದ ಇಳಿದ ಅವರು ಟ್ರಾಫಿಕ್ ತೆರವುಗೊಳಿಸಲು ಬಸ್ ತಳ್ಳಲು ಇತರರೊಂದಿಗೆ ಸೇರಿಕೊಂಡರು.
68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 12 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.