ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಕೈವಶ ಮಾಡಿಕೊಳ್ಳುತ್ತಿದ್ದಂತೆ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದು, ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.
ಅಲ್ಲದೆ ಬ್ಲೂ ಟಿಕ್ ನೀಡಲು ಶುಲ್ಕ ಪಾವತಿಸುವ ನಿಯಮವನ್ನು ಜಾರಿಗೆ ತಂದಿದ್ದು, ಭಾರತೀಯರು ಇದನ್ನು ಪಡೆಯಲು ಮಾಸಿಕ 650 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಇದಕ್ಕೆ ಭಾರತದ ಮೊದಲ ಬ್ಲೂ ಟಿಕ್ ಖಾತೆದಾರೆ ಎಂಬ ಹೆಗ್ಗಳಿಕೆ ಹೊಂದಿರುವ ನೈನಾ ರೇಧು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು ಕಳೆದ 16 ವರ್ಷಗಳಿಂದ ಹಣ ಪಾವತಿಸದೆ ನಾನು ಟ್ವಿಟ್ಟರ್ ಬಳಸುತ್ತಿದ್ದೇನೆ. ಈಗಲೂ ಕೂಡ ಹಣ ಪಾವತಿಸುವುದಿಲ್ಲ ಎಂದು ಹೇಳಿದ್ದಾರೆ. ಟ್ವಿಟ್ಟರ್ ನಲ್ಲಿ ನೈನಾ 22,000 ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.