ಟಿವಿ ಹಾಗೂ ಬಾಲಿವುಡ್ನ ಖ್ಯಾತ ಕಲಾವಿದ ಅರವಿಂದ್ ತ್ರಿವೇದಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳು ಪ್ರೇಕ್ಷಕರಲ್ಲಿ ಸದಾ ಜೀವಂತವಾಗಿರುತ್ತವೆ. ರಾಮಾಯಣದಲ್ಲಿ ರಾವಣನ ಪಾತ್ರದ ಮೂಲಕ ಅರವಿಂದ್ ತ್ರಿವೇದಿ ಜನಮನ ಗಳಿಸಿದ್ದರು.
ಅರವಿಂದ್ ತ್ರಿವೇದಿ ಒಮ್ಮೆ ನಟಿ ಹೇಮಾ ಮಾಲಿನಿಗೆ 20 ಬಾರಿ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ನಡೆದಿದ್ದು 70ರ ದಶಕದಲ್ಲಿ ತೆರೆಕಂಡ ‘ಹಮ್ ತೇರೆ ಆಶಿಕ್ ಹೇ’ ಸಿನೆಮಾ ಚಿತ್ರೀಕರಣದಲ್ಲಿ. ಈ ಚಿತ್ರದಲ್ಲಿ ಹೇಮಾ ಮಾಲಿನಿ ಮತ್ತು ಜಿತೇಂದ್ರ ಅವರೊಂದಿಗೆ ಅರವಿಂದ್ ತ್ರಿವೇದಿ ಕೂಡ ನಟಿಸಿದ್ದಾರೆ. ಅರವಿಂದ್ ತ್ರಿವೇದಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ದೃಶ್ಯವೊಂದರಲ್ಲಿ ಅರವಿಂದ್ ತ್ರಿವೇದಿ ಹೇಮಾ ಮಾಲಿನಿಗೆ ಕಪಾಳಮೋಕ್ಷ ಮಾಡಬೇಕಾಗಿತ್ತು. ಆದ್ರೆ ಖ್ಯಾತ ನಟಿ ಹೇಮಾ ಮಾಲಿನಿ ಅವರನ್ನು ನೋಡಿ ತ್ರಿವೇದಿ ನರ್ವಸ್ ಆಗಿಬಿಟ್ಟಿದ್ದರು. ಎಷ್ಟೇ ಪ್ರಯತ್ನಿಸಿದ್ರೂ ಹೇಮಾ ಮಾಲಿನಿ ಕಪಾಳಕ್ಕೆ ಬಾರಿಸಲು ಅವರಿಂದ ಸಾಧ್ಯವಾಗಲೇ ಇಲ್ಲ. ಇದಕ್ಕೆ 20 ಟೇಕ್ ತೆಗೆದುಕೊಳ್ಳಬೇಕಾಯಿತಂತೆ.
ಕೊನೆಗೆ ಹೇಮಾ ಮಾಲಿನಿ ಅವರೇ ಮನವೊಲಿಸಿದ ಮೇಲೆ ದೃಶ್ಯ ಒಪ್ಪಿಗೆಯಾಗಿತ್ತು. ಈ ಕುತೂಹಲಕಾರಿ ಘಟನೆಯ ಬಗ್ಗೆ ರಮಾನಂದ್ ಸಾಗರ್ ಅವರ ಪುತ್ರ ಪ್ರೇಮ್ ಸಾಗರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ರಾವಣನ ಪಾತ್ರಕ್ಕೆ ರಮಾನಂದ್ ಸಾಗರ್ ಅವರ ಮೊದಲ ಆಯ್ಕೆ ಅರವಿಂದ್ ತ್ರಿವೇದಿ ಆಗಿರಲಿಲ್ಲ. ಅಮರೀಶ್ ಪುರಿ ಆ ಪಾತ್ರ ಮಾಡಬೇಕೆಂದು ಬಯಸಿದ್ದರು. ಆದರೆ ತ್ರಿವೇದಿ ಅವರ ಬಾಡಿ ಲಾಂಗ್ವೇಜ್ ಮತ್ತು ವರ್ತನೆಯಿಂದ ಪ್ರಭಾವಿತರಾಗಿ ಆ ಪಾತ್ರ ನೀಡಿದ್ದರು.