ಕೆಲವರಿಗೆ ಹಣೆಯ ಮೇಲೆ ನೆರಿಗೆಗಳು ಮೂಡುತ್ತವೆ. ವಯಸ್ಸು, ಸೂರ್ಯನ ಶಾಖ ಹೀಗೆ ಈ ಚರ್ಮದ ಸಮಸ್ಯೆಯ ಹಿಂದೆ ಹಲವು ಕಾರಣಗಳಿವೆ. ನಿಮ್ಮ ಹಣೆಯ ಚರ್ಮವನ್ನು ಬಿಗಿಗೊಳಿಸಲು ಮತ್ತು ಸುಕ್ಕುಗಳನ್ನು ತೊಡೆದು ಹಾಕುವುದು ಸುಲಭ. ಇದಕ್ಕಾಗಿ ನೀವು ಮಾಡಿಕೊಳ್ಳಬೇಕು.
ನಿಮ್ಮ ಚರ್ಮವನ್ನು ಹೆಚ್ಚು ಸಮಯದವರೆಗೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಹಣೆಯ ಸುಕ್ಕುಗಳು ಉಂಟಾಗಬಹುದು. ಆದ್ದರಿಂದ ಸೂರ್ಯನಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಬಿರು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಿ.
ಒಂದು ವೇಳೆ, ಹೊರಹೋಗುವುದು ಅನಿವಾರ್ಯವಾದರೆ ಮುಖ ಸೇರಿದಂತೆ ನಿಮ್ಮ ಇಡೀ ದೇಹದ ಮೇಲೆ ಒಳ್ಳೆಯ ಸನ್‌ಸ್ಕ್ರೀನ್ ಲೋಶನ್ ಹಚ್ಚಿ. ಬಿಸಿಲಲ್ಲಿದ್ದಾಗ ಪ್ರತಿ 3 ಗಂಟೆಗಳಿಗೊಮ್ಮೆ ಅದನ್ನು ಹಚ್ಚಿಕೊಳ್ಳಿ. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ.
ಮಾನಸಿಕ ಒತ್ತಡವೂ ಚರ್ಮ ಸುಕ್ಕುಗಟ್ಟಲು ಪ್ರಮುಖ ಕಾರಣ. ವ್ಯಾಯಾಮ ಮತ್ತು ಯೋಗದ ಮೂಲಕ ನೀವದನ್ನು ತಪ್ಪಿಸಬಹುದು. ಚಿಂತೆ ಮಾಡುವುದರಿಂದ್ಲೂ ಹಣೆಯ ಮೇಲೆ ಸುಕ್ಕು ಮೂಡುತ್ತದೆ. ಚಿಂತೆಯ ರೇಖೆಗಳನ್ನು ತೊಡೆದುಹಾಕಲು ನೀವು ಧ್ಯಾನ ಅಥವಾ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಬಹುದು.
ಅಲ್ಲದೆ, ಹಣ್ಣುಗಳು ಮತ್ತು ಹಸಿರು ತರಕಾರಿಗಳು ಸೇರಿದಂತೆ ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡಿ. ಶುಷ್ಕ ಚರ್ಮದ ಮೇಲೆ ಸುಕ್ಕುಗಳು ಹೆಚ್ಚು ಎದ್ದು ಕಾಣುತ್ತವೆ. ಆದ್ದರಿಂದ ಹೆಚ್ಚು ನೀರು ಕುಡಿಯುವುದು ಮುಖ್ಯ.
ಪ್ರತಿದಿನ ಕನಿಷ್ಠ 8 ಲೋಟ ನೀರು ಕುಡಿಯಿರಿ. ಒಂದು ವೇಳೆ ನೀವು ಕೆಲಸ ಮಾಡುತ್ತಿದ್ದರೆ ಅಥವಾ ಬಿಸಿಲಿನಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರೆ, ನೀರು ಮತ್ತು ಹಣ್ಣಿನ ರಸವನ್ನು ನೀವು ಹೆಚ್ಚಾಗಿ ಸೇವಿಸಿ.