ʼಕಾಂತಾರʼ ಬಳಿಕ ಮೀಸಲಾತಿ ನ್ಯಾಯದ ಬಗ್ಗೆ ದನಿಯೆತ್ತಿದ ನಟ ಚೇತನ್ 08-11-2022 8:50PM IST / No Comments / Posted In: Featured News, Live News, Entertainment ಕಾಂತಾರ ಸಿನಿಮಾಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ ಭಾರೀ ವಿವಾದವೆಬ್ಬಿಸಿದ ನಟ ಅಹಿಂಸಾ ಚೇತನ್ ಮೀಸಲಾತಿ ವಿಚಾರವಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು ನ್ಯಾಯ ಬೇಕಾಗಿದೆ ಎಂದಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವುದು ಅವಶ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಈಗ ನಡೆಯುತ್ತಿರುವುದು ನ್ಯಾಯಕ್ಕೆ ಹೊರತಾಗಿದೆ. ಮೀಸಲಾತಿಯು ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆಗೆ ಪೂರಕವಾಗಿರಬೇಕೆ ಹೊರತು ಅರ್ಥ ವ್ಯವಸ್ಥೆಗೆ ಪೂರಕವಾಗಿರುವಂತಿರಬಾರದು. 10% ಹಾಗು 8 ಲಕ್ಷ ಆರ್ಥಿಕ ಚೌಕಟ್ಟಿನ ನಿರ್ಣಯ ಅನಿಯಂತ್ರಿತ ಹಾಗು ನ್ಯಾಯಸಮ್ಮತವಲ್ಲವೆಂದಿದ್ದಾರೆ. ಚೇತನ್ ಪೋಸ್ಟ್ ಅನ್ನು ಹಲವರು ಲೈಕ್ ಮಾಡಿದ್ದು ದನಿಗೂಡಿಸಿದ್ದಾರೆ.