ಲಕ್ನೋ: ಇತ್ತೀಚಿನ ದಿನಗಳಲ್ಲಿ ಹುಟ್ಟು ಹಬ್ಬ ಸೇರಿದಂತೆ ಕೆಲವೊಂದು ಸೆಲಿಬ್ರೇಷನ್ ಗಳನ್ನ ರಸ್ತೆಗಳಲ್ಲಿ ಮಾಡುವುದು ಕಾಮನ್ ಆಗಿದೆ. ರಸ್ತೆಯಲ್ಲಿ ಮಾಡೋದು ತಪ್ಪೇ. ಆದರೆ ಸೆಲಿಬ್ರೇಷನ್ ಮಾಡಿದ ನಂತರ ರಸ್ತೆಯಲ್ಲಿ ಕಸ ಹಾಗೆ ಬಿಟ್ಟು ಹೋಗೋದು ಎಷ್ಟು ಸರಿ. ಇಂಥಹದ್ದೇ ಘಟನೆಯೊಂದು ನಡೆದಿದ್ದು, ರಸ್ತೆ ಗಬ್ಬೆಬ್ಬಿಸಿದವರಿಗೆ ಪೊಲೀಸರು ಸರಿಯಾದ ಚಾಟಿ ಏಟು ಕೊಟ್ಟಿದ್ದಾರೆ.
ಹೌದು, ಸಾರ್ವಜನಿಕ ಸ್ಥಳಗಳನ್ನು ಗಬ್ಬೆಬ್ಬಿಸುವವರಿಗೆ ಪೊಲೀಸರು ಇದೀಗ ಸರಿಯಾಗಿ ಶಾಸ್ತಿ ಮಾಡಿದ್ದಾರೆ. ಬರ್ತಡೇ ಸೆಲಿಬ್ರೇಷನ್ ಮಾಡಿ ರಸ್ತೆ ಗಬ್ಬು ಮಾಡಿದ್ದವರನ್ನೇ ಕರೆಸಿ ರಸ್ತೆ ಕ್ಲೀನ್ ಮಾಡುವ ಕೆಲಸ ಕೊಟ್ಟಿದ್ದಾಋೆ ಲಕ್ನೋ ಪೊಲೀಸರು. ಉತ್ತರಪ್ರದೇಶದ ಲಕ್ನೋದಲ್ಲಿ ಘಟನೆ ನಡೆದಿದೆ.
ಕಳೆದ ಶುಕ್ರವಾರ ಮಧ್ಯರಾತ್ರಿ 11 ಗಂಟೆ ಸುಮಾರಿಗೆ ಐವರು ಯುವಕರ ಗುಂಪು ಅಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದೆ. ಕೇಕ್ ನೆಲ್ಲಾ ರಸ್ತೆಗೆ ಹಾಕಿ ರಸ್ತೆ ಹಾಳು ಮಾಡಿದ್ದರು.
ಗೌತಂಪಲ್ಲಿ ಪೊಲೀಸ್ ಠಾಣೆ ಮುಖ್ಯಸ್ಥ ಸುಧೀರ್ ಅವಸ್ಥಿ ಗಸ್ತು ತಿರುಗುವ ವೇಳೆ ಇದನ್ನು ನೋಡಿದ್ದಾರೆ. ನಂತರ ಯುವಕರಿಗೆ ಸ್ಥಳವನ್ನು ಸ್ವಚ್ಛಗೊಳಿಸಿ ಹೋಗುವಂತೆ ಸೂಚನೆ ನೀಡಿದ್ದಾರೆ. ಪೊಲೀಸರ ಮಾತಿನಂತೆ ಯುವಕರು ಆ ಸ್ಥಳವನ್ನು ಕ್ಲೀನ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಇನ್ನು ವಿಡಿಯೋದಲ್ಲಿ ಯುವಕರಿಗೆ ಇದು ನಿಮ್ಮ ಮನೆ ಅಲ್ಲ ಎಂದು ಅಧಿಕಾರಿ ಹೇಳುತ್ತಿರುವುದು ಗಮನಿಸಬಹುದು.