ಕೆಲವು ಸಾಹಸಗಳು ನಮ್ಮ ಮೈನವಿರೇಳಿಸುತ್ತವೆ. ಮತ್ತೆ ಕೆಲವು ಸಾಹಸಗಳು ನಮ್ಮ ಉಸಿರು ಬಿಗಿಹಿಡಿಯುವಂತೆ ಮಾಡುತ್ತವೆ. ಇಂಥ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗ್ತಾನೇ ಇರುತ್ತೆ. ಈಗ ಮತ್ತೆ ಅಂತಹದ್ದೇ ಒಂದು ವಿಡಿಯೊ ಇತ್ತಿಚೆಗೆ ವೈರಲ್ ಆಗಿದೆ.
ಇಲ್ಲಿದೆ ನೋಡಿ ವೈರಲ್ ಆಗಿರೋ ಶಾಕಿಂಗ್ ವಿಡಿಯೋ. ಒಬ್ಬ ವ್ಯಕ್ತಿ ಮೆಟ್ಟಿಲು ಹತ್ತುತ್ತಿರುವ ದೃಶ್ಯ ನೋಡಿ. ಆದರೆ ಈ ವ್ಯಕ್ತಿ ಎಲ್ಲರಂತೆ ಸಾಮಾನ್ಯವಾಗಿ ಮೆಟ್ಟಿಲು ಹತ್ತುತ್ತಿದ್ದಾನೆ ನಿಜ. ಆದರೆ ಈ ವ್ಯಕ್ತಿಯ ತಲೆಯ ಮೇಲೆ ಇನ್ನೊಬ್ಬ ವ್ಯಕ್ತಿ ತಲೆ ಕೆಳಗೆ ಮಾಡಿ ನಿಂತಿದ್ದಾನೆ ಗಮನಿಸಿದಾ.? ಈ ದೃಶ್ಯ ನೋಡಿದ್ರೆನೆ, ಮೈ ಜುಮ್ ಅನ್ನುತ್ತೆ.
ಒಬ್ಬರು ಇನ್ನೊಬ್ಬರ ತಲೆ ಮೇಲೆ ಹೀಗೆ ನಿಲ್ಲುವುದೇ ಹರಸಾಹಸದ ಕೆಲಸ. ಇನ್ನೂ ಇಬ್ಬರೂ ಕೈ ಬಿಟ್ಟು ಮೆಟ್ಟಿಲು ಹತ್ತುವ ಕೆಲಸ ಇದೆ ಅಲ್ಲಾ ಅದು ಊಹೆಗೂ ಮೀರಿದ್ದ ಅಪಾಯ. ಆದರೂ ಬ್ಯಾಲೆನ್ಸ್ ಮಾಡಿಕೊಂಡು ಹತ್ತುತ್ತಿರೋದನ್ನ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಅಷ್ಟೆಅಲ್ಲ ಇವರಿಬ್ಬರು ಲೀಲಾಜಾಲವಾಗಿ ಮೆಟ್ಟಿಲು ಹತ್ತುತ್ತಿರುವಾಗಲೇ ಮಧ್ಯದಲ್ಲಿ ಒಬ್ಬ ಯುವಕ ಅಡ್ಡ ಬರುತ್ತಾನೆ. ಆದರೂ ಇವರಿಬ್ಬರಿಗೂ ಯಾವುದೇ ರೀತಿ ಡಿಸ್ಟರ್ಬ್ ಮಾಡುವುದಿಲ್ಲ ಬದಲಾಗಿ ಇಬ್ಬರೂ ಬ್ಯಾಲೆನ್ಸ್ ಮಾಡಿಕೊಂಡೇ ಹತ್ತುತ್ತಾರೆ.
ಈ ವಿಡಿಯೋವನ್ನ ರೆಡ್ಡಿಟ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಇಬ್ಬರು ಯುವಕರು ಹಾಗೂ ಒಂದು ಮೆಟ್ಟಿಲು ಅಂತ ಟೈಟಲ್ ಕೂಡಾ ಕೊಟ್ಟಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿ ಈ ಯುವಕರ ಸಾಹಸವನ್ನ ನೋಡಿ ಮೆಚ್ಚುತ್ತಿದ್ದಾರೆ ಅಷ್ಟೆ ಅಲ್ಲ. ಇಂತಹ ಸಾಹಸ ಮಾಡುವುದಕ್ಕೂ ಗುಂಡಿಗೆ ಗಟ್ಟಿ ಇರಬೇಕು ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋ ನೋಡಿ ನೀವು ಇಂತಹ ಸಾಹಸಕ್ಕೆ ಕೈ ಹಾಕಿದ್ರೆ ಅಷ್ಟೆ. ತಲೆ ಒಡೆದು ಹೋದರೂ ಅಚ್ಚರಿ ಏನಿಲ್ಲ. ಹಾಗಾಗಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ.