
ಅತ್ಯಂತ ನವೀನ ತಂತ್ರಜ್ಞಾನಗಳನ್ನು ರಚಿಸುವುದರಿಂದ ಹಿಡಿದು ಅತ್ಯಂತ ಹೃದಯಸ್ಪರ್ಶಿ ಚಲನಚಿತ್ರಗಳನ್ನು ತಯಾರಿಸುವವರೆಗೆ ಜಪಾನ್ ದೇಶವನ್ನು ಮೀರಿಸುವವರು ಇಲ್ಲ. ಆಟೋಟಗಳು ಹಾಗೂ ಮಕ್ಕಳಲ್ಲಿ ಶಿಸ್ತಿನ ವಿಷಯ ಬಂದಾಗಲೂ ಜಪಾನ್ ಸದಾ ಮುಂದು. ಅಂಥದ್ದೇ ವಿಡಿಯೋ ಒಂದು ಈಗ ವೈರಲ್ ಆಗಿದೆ.
ಅಪರೂಪದ, ಕುತೂಹಲಭರಿತ ನಡುಗೆಯ ಕಾರ್ಯಕ್ರಮವನ್ನು ನೀಡಿರುವ ಜಪಾನಿನ ವಿದ್ಯಾರ್ಥಿಗಳು ನೆಟ್ಟಿಗರನ್ನು ಕುತೂಹಲಕ್ಕೆ ತಳ್ಳಿದ್ದಾರೆ. ‘ಶುದಾನ್ ಕೌಡೌ’ ಎಂದು ಕರೆಯಲ್ಪಡುವ ವಿದ್ಯಾರ್ಥಿಗಳ ಗುಂಪು ಈ ಕಾರ್ಯಕ್ರಮ ನೀಡಿದೆ. ನಡುಗೆಯಲ್ಲಿ ಸಿಂಕ್ರೊನೈಸ್ ಮಾಡಿದ ರೀತಿ ಅಚ್ಚರಿ ಮೂಡಿಸುವಂತಿದೆ.
ಈ ಕ್ರೀಡೆಯು 1960 ರಿಂದ ನಿಪ್ಪಾನ್ ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯದ ಒಂದು ಭಾಗವಾಗಿದೆ. ಈಗ ವಿಶ್ವವಿದ್ಯಾನಿಲಯದ ವಾರ್ಷಿಕ ಪ್ರದರ್ಶನದಲ್ಲಿ ಇದನ್ನು ಮಾಡಲಾಗಿದ್ದು, ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಅಪರೂಪದ ವಿಡಿಯೋ ವಿಶ್ವಖ್ಯಾತಿ ಹೊಂದುವಂತಾಗಿದೆ.
ವಿದ್ಯಾರ್ಥಿಗಳು ಸಿಂಕ್ರೊನೈಸ್ ಮಾಡಲಾದ ರೀತಿಯಲ್ಲಿ ನಡೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ವಿದ್ಯಾರ್ಥಿಗಳು ಪ್ರದರ್ಶನಕ್ಕೆ ತಿಂಗಳ ಮೊದಲು ವಾರದಲ್ಲಿ ಮೂರು ದಿನ ಅಭ್ಯಾಸ ಮಾಡುತ್ತಾರೆ. ಇಂಥದ್ದೊಂದು ಅಪರೂಪದ ಚಿಕ್ಕದಾಗಿರುವ ಈ ವಿಡಿಯೋ ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದು, ಜಪಾನಿಗರನ್ನು ಮತ್ತೊಮ್ಮೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಶಿಸ್ತಿಗೆ ಇವರಿಗೆ ಇವರೇ ಸಾಟಿ ಎಂದು ಕೊಂಡಾಡಿದ್ದಾರೆ.
https://twitter.com/RichiGlezDavila/status/1588965861549043712?ref_src=twsrc%5Etfw%7Ctwcamp%5Etweetembed%7Ctwterm%5E1588965861549043712%7Ctwgr%5E674818ad14fff01e78933a37f1a140497acc7205%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fvideo-of-japanese-students-synchronised-walking-has-left-the-internet-impressed-6328639.html