alex Certify ಬರಿಯ ಕಡಲತೀರವಲ್ಲವಯ್ಯಾ…… ಹೂವಿನ ತೋಟ….. ಒಡಿಶಾದ ಕಣ್ಮನ ಸೆಳೆಯುವ ಬೀಚ್​ ಫೋಟೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಯ ಕಡಲತೀರವಲ್ಲವಯ್ಯಾ…… ಹೂವಿನ ತೋಟ….. ಒಡಿಶಾದ ಕಣ್ಮನ ಸೆಳೆಯುವ ಬೀಚ್​ ಫೋಟೋ ವೈರಲ್​

ಒಡಿಶಾ: ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಲವಾರು ಕುತೂಹಲಕರವಾಗಿರುವ ವಿಡಿಯೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿದ್ದು, ಅವುಗಳು ಸಾಕಷ್ಟು ವೈರಲ್​ ಆಗುತ್ತಿವೆ. ಇದೀಗ ಒಡಿಶಾದ ಸಮುದ್ರ ತೀರಗಳ ಸುಂದರ ಚಿತ್ರಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಹಸಿರು ಬಳ್ಳಿಗಳು ಮತ್ತು ಸಣ್ಣ ಗುಲಾಬಿ ಹೂವುಗಳಿಂದ ಆವೃತವಾದ ಮರಳಿನ ತೀರದ ಫೋಟೋ ಇದಾಗಿದ್ದು, ನೋಡುಗರನ್ನು ಪುಳಕಿತವಾಗಿಸುತ್ತದೆ.

ಶಾಂತವಾದ ಆಕಾಶ, ಕೆಳಕ್ಕೆ ಹೂವುಗಳ ಹಾಸು, ಸ್ವಲ್ಪ ದೂರದಲ್ಲಿ ಸಮುದ್ರವು ಗೋಚರಿಸುತ್ತದೆ. ಕಣ್ಮನ ತಣಿಸುವ ಈ ಫೋಟೋಗಳನ್ನು ಪುರಿಯ ಗೋಲ್ಡನ್ ಬೀಚ್ ಮತ್ತು ನೀಲಾದ್ರಿ ಬೀಚ್‌ನಲ್ಲಿ ತೆಗೆಯಲಾಗಿದೆ. ಚಿಕ್ಕ ಸಸ್ಯಗಳಿಂದ ಆವೃತವಾದ ವಿಶಾಲವಾದ ಭೂಮಿ ಹಾಗೂ ಹಸಿರು ಎಲೆಗಳಿಂದ ಹೊದ್ದು ಮಲಗಿರುವ ಪ್ರಕೃತಿಯ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂದರೆ ಅಲ್ಲಿರುವ ಮರಳು ಕಣ್ಣಿಗೆ ಗೋಚರಿಸುವುದೇ ಇಲ್ಲ. ಗುಲಾಬಿ ಹಾಗೂ ವಿವಿಧ ವರ್ಣಮಯ ಹೂವುಗಳೊಂದಿಗೆ ಮನಸ್ಸನ್ನು ಇವು ತಂಪಾಗಿಸುತ್ತವೆ.

ಇವು ಬರೀ ಸಮುದ್ರವಲ್ಲ, ಬದಲಿಗೆ ಫ್ಲವರ್​ ಬೀಚ್​. ಪುರಿಯ ಎರಡು ಶುದ್ಧ ಮತ್ತು ಅತ್ಯಂತ ಪ್ರಶಾಂತ ಕಡಲತೀರಗಳು ಇವು. ಇವುಗಳ ಹೆಸರು ಗೋಲ್ಡನ್ ಮತ್ತು ನೀಲಾದ್ರಿ. ಹೂಗಳ ಕಣಿವೆಯ ಮೇಲೆ ಸರಿಸಿ… ಮರಳಿನ ದಿಬ್ಬಗಳು ಎಂದು ಸುಶಾಂತ್​ ಅವರು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜೀವನದಲ್ಲಿ ಒಮ್ಮೆ ಇಲ್ಲಿಗೆ ಭೇಟಿ ಕೊಡಬೇಕಿದೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...