ನವೆಂಬರ್ 8, 2016 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶಾಕ್ ನೀಡಿದ್ದರು. ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ್ದರು. 500 ಹಾಗೂ 1000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ್ದರು. ಈ ಘಟನೆ ನಡೆದು ಇಂದಿಗೆ 6 ವರ್ಷಗಳಾಗಿವೆ.
ಕಪ್ಪು ಹಣ ನಿಯಂತ್ರಣ ಹಾಗೂ ಭ್ರಷ್ಟಾಚಾರ ತಡೆಯುವ ಸಲುವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಕಿಅಂಶಗಳು ಮಾತ್ರ ಶಾಕ್ ಆಗುವಂತಿತ್ತು.
ನಿಷೇಧಿತ ಬಹುತೇಕ ಎಲ್ಲ ನೋಟುಗಳು ಭಾರತೀಯ ರಿಸರ್ವ್ ಬ್ಯಾಂಕ್ ತಲುಪಿದ್ದವು. 2017-2018 ರ ವಾರ್ಷಿಕ ವರದಿಯಲ್ಲಿ ಬ್ಯಾಂಕ್ ಈ ವಿಷಯವನ್ನು ತಿಳಿಸಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ, ನವೆಂಬರ್ 8, 2016 ರ ವೇಳೆಗೆ ಮಾರುಕಟ್ಟೆಯಲ್ಲಿ 15.42 ಲಕ್ಷ ಕೋಟಿ 500 ಹಾಗೂ 1000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ನಿಷೇಧದ ನಂತ್ರ ನೋಟುಗಳ ವಿನಿಮಯ ನಡೆದಿತ್ತು.
ಬ್ಯಾಂಕ್ ಗಳು ಹಳೆ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ನೀಡಿದ್ದವು. ರಿಸರ್ವ್ ಬ್ಯಾಂಕ್ ಗೆ 15.31 ಲಕ್ಷ ಕೋಟಿ ನಿಷೇಧಿತ ನೋಟುಗಳು ವಾಪಸ್ ಆಗಿತ್ತು.