ಅಮಿತಾಬ್ಬಚ್ಚನ್ ಹಾಗೂ ಜಯಾಬಚ್ಚನ್ ಜೋಡಿ ನೆನಪಿದೆಯಾ, ಎಷ್ಟೋ ಪ್ರೇಮಿಗಳಿಗೆ ಇವರಿಬ್ಬರು ಮಾದರಿಯಾಗಿದ್ದಾರೆ. ಪ್ರೀತಿ ಪ್ರೇಮಕ್ಕೆ ಜಾತಿ, ಧರ್ಮ, ಕುಲ, ಗೋತ್ರ ಅಷ್ಟೇ ಏಕೆ ಬಣ್ಣ, ಆಕಾರ, ಎತ್ತರ ಕೂಡ ಬೇಕಾಗಿಲ್ಲ ಅಂತ ಇವರಿಬ್ಬರೂ ಪ್ರೂವ್ ಮಾಡಿ ಅದ್ಯಾವುದೋ ಕಾಲವಾಗಿದೆ. ಈಗ ಇದೇ ಲಿಸ್ಟ್ ಗೆ ಹೊಸ ಜೋಡಿಯೊಂದು ಸೇರಿದೆ. ಹೆಸರು ಬೆಥಾನಿ ಕಸೋರಂಗ್ ಮತ್ತು ಡ್ಯಾನಿ. ಈ ಜೋಡಿ ಸ್ಪೆಷಾಲಿಟಿ ಏನಂದ್ರೆ ಇವರಿಬ್ಬರಲ್ಲಿಯೂ 1 ಫೀಟ್ 7 ಇಂಚಿನ ಎತ್ತರದ ವ್ಯತ್ಯಾಸವಿದೆ.
ಹುಟ್ಟುವಾಗಲೇ ದೇವರು ಒಬ್ಬರಿಗೊಬ್ಬರು ಅನ್ನುವ ಹಾಗೆ ಜೋಡಿಗಳನ್ನ ಸೃಷ್ಟಿಸಿರುತ್ತಾರೆ ಅನ್ನುವ ಮಾತಿದೆ. ಬೆಥಾನಿ ಕಸೋರಂಗ್ ಡ್ಯಾನಿ ಇವರಿಬ್ಬರ ಜೋಡಿ ನೋಡ್ತಿದ್ರೆ ಆ ಮಾತು ಸುಳ್ಳು ಅಂತ ಅನಿಸೋಲ್ಲ. ಅಸಲಿಗೆ ಬೆಥಾನಿ ಎತ್ತರ 4’10″ ಆಗಿದೆ, ಇನ್ನು ಡ್ಯಾನಿ ಎತ್ತರ 6’5′ ಇದೆ. ಇವರಿಬ್ಬರ ಪರಿಚಯ ಟಿಕ್ಟಾಕ್ ನಲ್ಲಿ ಆಗಿದ್ದು, ಅಲ್ಲೇ ಇವರಿಬ್ಬರಲ್ಲಿಯೂ ಪ್ರೇಮಾಂಕುರವಾಗಿದೆ. 90ಸಾವಿರ ಫಾಲೋವರ್ಸ್ಗಳಿರುವ ಈ ಜೋಡಿ ನಡುವೆ ಇರುವ ಎತ್ತರ ಕುರಿತು ಜನರು ಪ್ರಶ್ನೆ ಕೇಳುವುದು ಸಹಜ. ಅದಕ್ಕೆ ಬೆಥಾನಿಯವರು ಸದಾ ತಮಾಷೆಯಲ್ಲೇ ಖುಷಿಖುಷಿಯಾಗಿ ತನ್ನ ಫಾಲೋವರ್ಸ್ಗಳಿಗೆ ಉತ್ತರವನ್ನ ಕೊಡುತ್ತಾರೆ.
ತಾನು ತನ್ನ ಗಂಡನ ದೈತ್ಯಾಕಾರದ ಬೂಟುಗಳನ್ನ ನೋಡಿ ಶಾಕ್ ಆಗುತ್ತೇನೆ. ಅಲ್ಲದೇ ನಾವಿಬ್ಬರು ನೃತ್ಯ ಮಾಡುವಾಗ ಅದನ್ನ ಎಂಜಾಯ್ ಮಾಡುತ್ತೇನೆ. ಜೊತೆಗೆ ಡ್ಯಾನಿ ಹೊಸ ಬಟ್ಟೆ ತಂದಾಗ ನಾನು ಕೂಡಾ ಆ ಬಟ್ಟೆಯಲ್ಲೇ ಅಡ್ಜಸ್ಟ್ ಆಗುತ್ತೇನೆ ಎಂದು ತಮಾಷೆ ಮಾಡುತ್ತಾರೆ.
ಹೀಗೆ ಚಿಕ್ಕಪುಟ್ಟ ವಿಷಯಗಳಲ್ಲಿ ನಾವಿಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುತ್ತೇವೆ. ಮನೆಯಲ್ಲಿರುವ ವಸ್ತುಗಳನ್ನ ಇಡುವಾಗ, ಕಾರ್ ಡ್ರೈವ್ ಸೀಟ್ನಲ್ಲಿ ಕೂರುವಾಗ ಎಲ್ಲವೂ ಅಡ್ಜಸ್ಟ್ ಆಗುವುದು ಅನಿವಾರ್ಯ. ನಮ್ಮ ಪ್ರೀತಿಗೆ ಇದಾವುದೂ ಅಡ್ಡಿ ಬಂದಿಲ್ಲ ಮುಂದೆ ಬರುವುದೂ ಇಲ್ಲ. ಈ ಜೋಡಿಯ ಫನ್ನಿ ವಿಡಿಯೋಗಳನ್ನ ಬೆಥಾನಿ ಆಗಾಗ ಪೋಸ್ಟ್ ಮಾಡ್ತಿರ್ತಾರೆ. ಫಾಲೋವರ್ಸ್ಗಳು ಕೂಡಾ ಇವರಿಬ್ಬರ ಈ ಪ್ರೀತಿಯ ವಿಡಿಯೋಗಳನ್ನ ನೋಡಿ ಖುಷಿ ಪಡ್ತಾನೇ ಇರ್ತಾರೆ.