alex Certify ಹಿಮಪಾತದ ʼಸೌಂದರ್ಯʼ ಸವಿಯಬೇಕೆ ? ಹಾಗಿದ್ದರೆ ಕಾಶ್ಮೀರದ ಈ ಜಾಗಕ್ಕೆ ಬನ್ನಿ ಎನ್ನುತ್ತಿದ್ದಾರೆ ಪ್ರವಾಸಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಪಾತದ ʼಸೌಂದರ್ಯʼ ಸವಿಯಬೇಕೆ ? ಹಾಗಿದ್ದರೆ ಕಾಶ್ಮೀರದ ಈ ಜಾಗಕ್ಕೆ ಬನ್ನಿ ಎನ್ನುತ್ತಿದ್ದಾರೆ ಪ್ರವಾಸಿಗರು

ನೀವು ಪರ್ವತವನ್ನು ಪ್ರೀತಿಸುತ್ತಿದ್ದು, ಮರಗಳ ಮೂಲಕ ಹಿಮಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬೇಕು ಎನಿಸಿಕೊಂಡಿದ್ದರೆ ಈ ಜಾಗಕ್ಕೊಮ್ಮೆ ಬನ್ನಿ. ಹಿಮಪಾತದಿಂದ ಹಲವು ಬಾರಿ ಸ್ಥಳೀಯರ ಬದುಕು ದುಸ್ಥರವಾಗುತ್ತಿದ್ದರೂ ಪ್ರವಾಸಿಗರಿಗೆ ಕಾಶ್ಮೀರ ಎಂದರೆ ಸ್ವರ್ಗ ಎನಿಸುತ್ತದೆ.

ಇಂಥ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬೇಕು ಎಂದುಕೊಂಡಿದ್ದರೆ, ಜಮ್ಮು ಮತ್ತು ಕಾಶ್ಮೀರದ ಮೊಘಲ್ ರಸ್ತೆಗೊಮ್ಮೆ ಭೇಟಿಕೊಡಿ. ಈ ನಂಬಲಾಗದ ಸೌಂದರ್ಯವನ್ನು ನೀವು ಸವಿಯಬಹುದು. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಮೊಘಲ್ ರಸ್ತೆ ಮತ್ತು ಪಿರ್ ಪಂಜಾಲ್ ಪ್ರದೇಶದಲ್ಲಿ ಭಾನುವಾರ ಕಂಡುಬಂದ ರಮಣೀಯ ದೃಶ್ಯವಿದು.

ತಾಜಾ ಹಿಮಪಾತದ ಅದ್ಭುತ ವಿಡಿಯೋ ಅನ್ನು ಸುದ್ದಿ ಸಂಸ್ಥೆ ಎಎನ್​ಐ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಹಿಮವು ರಸ್ತೆಯ ಮೇಲೆ ಹೇಗೆ ಹರಡಿಕೊಂಡಿತು ಎಂಬುದನ್ನು ಈ ವಿಡಿಯೋದಲ್ಲಿ ಕಣ್ತುಂಬಿಸಿಕೊಳ್ಳಬಹುದು, ಆದರೆ ಅಸಲಿಗೆ ಇಡೀ ಇಡೀ ಪ್ರದೇಶದಲ್ಲಿ ಸಂಚಾರ ಅಡಚಣೆಗೂ ಇದು ಕಾರಣವಾಯಿತು.

ಜನಪ್ರಿಯ ಪ್ರವಾಸಿ ತಾಣಗಳಾದ ಗುಲ್ಮಾರ್ಗ್ ಮತ್ತು ಸೋನಾಮಾರ್ಗ್ ಸೇರಿದಂತೆ ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಬೀಳುತ್ತಲೇ ಇದ್ದು, ಇದನ್ನು ಪ್ರವಾಸಿಗರು ಸವಿಯಲು ಇದು ಉತ್ತಮ ಕಾಲವಾಗಿದೆ ಎಂದು ಬಲ್ಲವರು ಹೇಳುತ್ತಾರೆ. “ಗುಲ್ಮಾರ್ಗ್, ಸೋನಾಮಾರ್ಗ್, ಗುರೇಜ್ ಮತ್ತು ಕರ್ನಾಹ್ ಸೇರಿದಂತೆ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಮಧ್ಯರಾತ್ರಿಯಲ್ಲಿ ಗಮನಾರ್ಹವಾದ ಹಿಮಪಾತ ಸಂಭವಿಸಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...