
ಸಂಚಾರ ನಿಯಮ ಉಲ್ಲಂಘನೆ ಕುರಿತಂತೆ ಪೊಲೀಸರು ನೀಡುವ ನೋಟಿಸ್ ಗಳು ವಿಭಿನ್ನ ಕಾರಣಕ್ಕೆ ಆಗಾಗ ವೈರಲ್ ಆಗುತ್ತಿರುತ್ತವೆ. ಈ ಹಿಂದೆ ಕಾರು ಓಡಿಸುತ್ತಿದ್ದ ವ್ಯಕ್ತಿಗೆ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡಿದ್ದ ಘಟನೆ ನಡೆದಿತ್ತು.
ಇದೀಗ ಇದನ್ನೇ ಹೋಲುವ ಮತ್ತೊಂದು ಪ್ರಕರಣ ನಡೆದಿದ್ದು, ಇದರಲ್ಲಿ ಮೃತಪಟ್ಟಿರುವ ವ್ಯಕ್ತಿಗೆ ನೀವು ಚಾಲನೆ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ ಎಂಬ ಕಾರಣಕ್ಕೆ ದಾವಣಗೆರೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಶಾಮನೂರಿನ ವಾಮದೇವಪ್ಪ ಎಂಬುವರು 2022ರ ಮಾರ್ಚ್ 7ರಂದು ನಿಧನರಾಗಿದ್ದಾರೆ. ಆದರೆ 2022ರ ಜೂನ್ 29ರಂದು ಆಜಾದ್ ನಗರ ಮುಖ್ಯ ರಸ್ತೆಯಲ್ಲಿ ನೀವು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದೀರಿ ಎಂದು ನೋಟಿಸ್ ನೀಡಲಾಗಿದೆ.
ನವೆಂಬರ್ 2ರಂದು ವಾಮದೇವಪ್ಪ ಅವರ ಕುಟುಂಬಕ್ಕೆ ಈ ನೋಟಿಸ್ ತಲುಪಿದ್ದು, ಈ ನೋಟಿಸ್ ನಲ್ಲಿ ನಿಯಮ ಉಲ್ಲಂಘನೆಗಾಗಿ 500 ರೂಪಾಯಿ ದಂಡ ಪಾವತಿಸಲು ಸೂಚಿಸಲಾಗಿದೆ.