alex Certify BIG NEWS: ಎಂಎಲ್‌ಎ ಹೆಸರಲ್ಲಿ KSRTC ಎಂಡಿಗೆ ಕರೆ; ವರ್ಗಾವಣೆಗೆ ಶಿಫಾರಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಂಎಲ್‌ಎ ಹೆಸರಲ್ಲಿ KSRTC ಎಂಡಿಗೆ ಕರೆ; ವರ್ಗಾವಣೆಗೆ ಶಿಫಾರಸು

ಬೆಂಗಳೂರು: ಶಾಸಕರ ಹೆಸರಿನಲ್ಲಿ ಕೆ ಎಸ್ ಆರ್ ಟಿ‌ ಸಿ ಎಂಡಿಗೆ ಕರೆ ಮಾಡಿ ವರ್ಗಾವಣೆಗೆ ಶಿಫಾರಸು ಮಾಡುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುನೀತ್ ಕುಮಾರ್ ಬಂಧಿತ ಆರೋಪಿ. ಮೈಸೂರು ಶಾಸಕ ನಾಗೇಂದ್ರ ಅವರ ಹೆಸರಿನಲ್ಲಿ ಕೆ ಎಸ್ ಆರ್ ಟಿ ಸಿ ಎಂಡಿ ಗೆ ಕರೆ ಮಾಡಿ ಕೆಲ ಸಿಬ್ಬಂದಿಗಳ ವರ್ಗಾವಣೆಗೆ ಶಿಫಾರಸು ಮಾಡಿದ್ದಾನೆ. ಮಂಡ್ಯ ಘಟಕದಿಂದ ಮಳವಳ್ಳಿ ಘಟಕಕ್ಕೆ ಚಾಲಕರು ಹಾಗೂ ನಿರ್ವಾಹಕರನ್ನು ವರ್ಗಾಯಿಸಲು ಸೂಚಿಸಿದ್ದಾನೆ.

ಅಧಿಕಾರಿಗಳು ಈ ಬಗ್ಗೆ ಶಾಸಕ ನಾಗೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಯಾರ ವರ್ಗಾವಣೆಗೂ ತಾವು ಶಿಫಾರಸು ಮಾಡಿಲ್ಲ ಎಂದು ಶಾಸಕರು ತಿಳಿಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...