ಟೆಕ್ ಜಗತ್ತು ಇದುವರೆಗೆ ನೋಡಿರದ ಅತ್ಯಂತ ಕ್ರೂರ ವಜಾಗೊಳಿಸುವಿಕೆಗಳಲ್ಲಿ ಒಂದಾದದ್ದು ಎಲಾನ್ ಮಸ್ಕ್ ಅವರ ಕೆಲಸ. ಮಸ್ಕ್ ಅವರು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಒಂದು ವಾರದ ನಂತರ ತನ್ನ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 7,500 ರಲ್ಲಿ 3,738 ಜನರನ್ನು ವಿಶ್ವದಾದ್ಯಂತ ಸಾಮೂಹಿಕ ವಜಾಗೊಳಿಸಲಾಗಿದೆ. ಇದಕ್ಕೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಇಲಾಖೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿರುವ ಕಾರಣ ನೋಟಿಸ್ ಕೂಡ ನೀಡದೇ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದೆ. ಭಾರತದಲ್ಲಿ, 200 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಕೆಲಸ ಕಳೆದುಕೊಂಡವರೆಲ್ಲರೂ ಭವಿಷ್ಯದ ಚಿಂತೆಯಲ್ಲಿರುವಾಗ ಯಶ್ ಅಗರ್ವಾಲ್ ಎಂಬ 25 ವರ್ಷದ ಭಾರತೀಯ ಯುವಕ ನಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಈ ಕುರಿತು ಟ್ವೀಟ್ ಮಾಡಿದ್ದಾರೆ, “ನನ್ನನ್ನು ಈಗಷ್ಟೇ ವಜಾಗೊಳಿಸಲಾಗಿದೆ. ಬರ್ಡ್ ಆ್ಯಪ್, ಈ ತಂಡದ ಭಾಗವಾಗಿರುವುದು ಒಂದು ಸಂಪೂರ್ಣ ಗೌರವ ಹಾಗೂ ಇದುವರೆಗಿನ ಶ್ರೇಷ್ಠ ಅನುಭವ ಎಂದು ಹೇಳಿರುವ ಯಶ್, #LoveWhereYouWorked #LoveTwitter ಎಂದು ಬರೆದುಕೊಂಡಿದ್ದಾರೆ.
ಅವರು ಟ್ವಿಟರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ನೀತಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಈ ಟ್ವೀಟ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
https://twitter.com/yashagarwalm/status/1588405497988018179?ref_src=twsrc%5Etfw%7Ctwcamp%5Etweetembed%7Ctwterm%5E1588405497988018179%7Ctwgr%5Eafcc4c92b638a2b312ffa01d9e4b504505309af7%7Ctwcon%5Es1_&ref_url=https%3A%2F%2Fwww.tribuneindia.com%2Fnews%2Ftrending%2F25-year-old-indian-mans-smiling-picture-after-getting-fired-from-twitter-goes-viral-447884