ಆನೆಗಳು ಅಸಾಧಾರಣವಾದ ಬುದ್ಧಿವಂತ ಪ್ರಾಣಿಗಳಾಗಿದ್ದು, ಇವುಗಳ ಕುರಿತು ಹಲವಾರು ವಿಡಿಯೋಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಆನೆಗಳ ಕುರಿತಾಗಿ ದಿನವೂ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಹಳೆಯ ವಿಡಿಯೋಗಳು ಮತ್ತೆ ಮುನ್ನಲೆಗೆ ಬರುತ್ತವೆ.
ಅಂಥದ್ದೇ ಒಂದು ಹಳೆಯ ವಿಡಿಯೋ ಇದೀಗ ಪುನಃ ವೈರಲ್ ಆಗಿದೆ. ಅದೇನೆಂದರೆ ಆನೆಯೊಂದು ಬೃಹದಾಕಾರವಾಗಿರುವ ಮರವೊಂದನ್ನು ಬುಡಸಹಿತ ಬೀಳಿಸುತ್ತದೆ. ಹೀಗೆ ಬೀಳಿಸುತ್ತಿರುವುದನ್ನು ನೋಡಿದಾಗ ಬಹುಶಃ ಅದು ಎಲೆ ತಿನ್ನಲು ಹೀಗೆ ಮಾಡುತ್ತಿರಬಹುದು ಎಂದು ಎನಿಸುತ್ತದೆ. ಆದರೆ ಈ ವಿಡಿಯೋದ ಕ್ಲೈಮ್ಯಾಕ್ಸ್ ಮಾತ್ರ ಜನರನ್ನು ನಕ್ಕು ನಗಿಸುವಂತಿದೆ.
ಇದಕ್ಕೆ ಕಾರಣ, ಆನೆ ಹೀಗೆ ಮರವನ್ನು ಬುಡ ಸಹಿತ ಕಿತ್ತು ಹಾಕಿರುವ ಉದ್ದೇಶ ಅದನ್ನು ತಿನ್ನಲು ಅಲ್ಲ, ಬದಲಿಗೆ ತನ್ನ ಹಿಂಬದಿಯನ್ನು ಉಜ್ಜಿಕೊಳ್ಳಲು ! ಈ ಆನೆಗೆ ತುರಿಕೆ ಉಂಟಾದ ಕಾರಣ ಉಜ್ಜಿಕೊಳ್ಳಲು ಏನೂ ಸಿಕ್ಕಿರಲಿಲ್ಲ. ಈ ಕಾರಣದಿಂದ ಮರವನ್ನು ಉರುಳಿಸಿ ಹಿಂಬದಿ ಉಜ್ಜಿಕೊಂಡಿದೆ. ಈ ವಿಡಿಯೋ ನೋಡಿದವರಂತೂ ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ.