ಕರಾಚಿ: ಪ್ರೀತಿ ಎಂಬುದು ಒಂಥರಾ ವಿಚಿತ್ರ. ಯಾವಾಗ, ಎಲ್ಲಿ, ಹೇಗೆ ಚಿಗುರುತ್ತದೆ ಎಂದು ಹೇಳುವುದೇ ಕಷ್ಟ. ಇಲ್ಲೊಂದು ಕುತೂಹಲ ಘಟನೆಯೊಂದರಲ್ಲಿ ಕಾರು ಕಲಿಸಲು ಬಂದ ಚಾಲಕನ ಗೇರ್ ಚೇಂಜಿಂಗ್ ಸ್ಟೈಲ್ಗೆ ಮನಸೋತು ಆತನನ್ನೇ ಮದುವೆಯಾಗಿದ್ದಾಳೆ !
ಈ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ ಡ್ರೈವಿಂಗ್ ಕಲಿಯಲು ಯುವತಿ ಡ್ರೈವಿಂಗ್ ಸ್ಕೂಲ್ಗೆ ದಾಖಲಾಗಿದ್ದಳು. ಚಾಲಕನ ಡ್ರೈವಿಂಗ್ ಸ್ಟೈಲ್ ಆಕೆಯ ಮನಸ್ಸು ಗೆದ್ದಿತ್ತು. ವಿಭಿನ್ನ ಶೈಲಿಯ ಡ್ರೈವಿಂಗ್ ಸ್ಕಿಲ್ ಅನ್ನು ಹೊಂದಿದ್ದ ಚಾಲಕನ ಗೇರ್ ಚೇಂಜಿಂಗ್ ಸ್ಟೈಲ್ ಯುವತಿಗೆ ಅಚ್ಚುಮೆಚ್ಚಾಯಿತು. ಗೇರ್ ಮೇಲೆ ಕೈ ಇಟ್ಟಿರುವ ಚಾಲಕನ ಕೈ ಮೇಲೆ ಕೈ ಇಟ್ಟುಕೊಂಡು ಕೂರುವುದೇ ಯುವತಿಗೆ ಪ್ರಿಯವಾಯಿತು. ಅಲ್ಲಿಂದ ಆತನಿಗೆ ಯುವತಿ ಮನಸೋತಳು.
ನಂತರ ತನ್ನ ಮನದಿಂಗಿತವನ್ನು ಚಾಲಕನಿಗೆ ಹೇಳಿದಾಗ, ಆತನಿಗೂ ಇವಳು ಇಷ್ಟವಾದಳು. ಇಬ್ಬರ ಮನೆಯವರೂ ಇದಕ್ಕೆ ಒಪ್ಪಿಗೆ ಸೂಚಿಸಿದರು. ಸದ್ಯ ಇಬ್ಬರೂ ಮದುವೆಯಾಗಿದ್ದಾರೆ. ಇವರ ಅಪರೂಪದ ಪ್ರೇಮ ಕಥನ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಥರಹೇವಾರಿ ಕಮೆಂಟ್ಗಳು ಬರುತ್ತಿವೆ.