ಬೆಂಗಳೂರು: ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗಿದ್ದ ಅಪ್ರಾಪ್ತೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಆ ದೃಶ್ಯಗಳನ್ನು ಚಿತ್ರಿಕರಿಸಿಕೊಂಡು ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪ್ರಕಾರಣ ಮತ್ತು ವಿಚಾರಣೆ ರದ್ದು ಮಾಡಬೇಕೆಂದು ಕೋರಿ ಕೇರಳದ ವ್ಯಕ್ತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಪರಿಶೀಲನೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಕೇಸ್ ರದ್ದುಪಡಿಸಲು ನಿರಾಕರಿಸಿದೆ.
ನಾನು ಗ್ರಾಹಕನಾಗಿ ವೇಶ್ಯಾವಾಟಿಕೆ ಕೇಂದ್ರಕ್ಕೆ ಹೋಗಿದ್ದು, ಮಾನವ ಕಳ್ಳ ಸಾಗಣೆ ಪ್ರಕರಣ, ಪೋಕ್ಸೋ ಅಥವಾ ಅತ್ಯಾಚಾರ ಪ್ರಕರಣ ದಾಖಲಿಸಲಾಗದು ಎಂದು ಆರೋಪಿ ವಾದಿಸಿದ್ದರು. ಆರೋಪಿ ವಾದವನ್ನು ತಳ್ಳಿ ಹಾಕಿದ ಹೈಕೋರ್ಟ್ ಪೀಠ, ಸಂತ್ರಸ್ತೆ ಅಪ್ರಾಪ್ತೆಯಾಗಿದ್ದು, ಆಕೆಯ ದೃಶ್ಯಗಳನ್ನು ದಾಖಲಿಸಿಕೊಂಡು ಬೆದರಿಕೆ ಹಾಕಿದ್ದು, ಆರೋಪಿಯನ್ನು ಗ್ರಾಹಕನೆಂದು ಪರಿಗಣಿಸಲಾಗುವುದಿಲ್ಲ. ಪೋಕ್ಸೋ ಕೇಸ್ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.