ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಕೆ.ಆರ್.ಎಸ್. ಅಗ್ರಹಾರದಲ್ಲಿ ಅತ್ತೆ ಮೇಲೆ ಸೊಸೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
65 ವರ್ಷದ ಚಿಕ್ಕತಾಯಮ್ಮ ಅವರ ಮೇಲೆ ಸೊಸೆ ಸೌಮ್ಯಾ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದ್ದು, ಗಾಯಗೊಂಡ ಚಿಕ್ಕತಾಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕತಾಯಮ್ಮ ಅವರಿಗೆ ಇಬ್ಬರು ಪುತ್ರರಿದ್ದು ಶಂಕರ್ ಪತ್ನಿ ಸೌಮ್ಯಾ ಮನೆ ಬಿಟ್ಟು ಹೋಗುವಂತೆ ಅತ್ತೆಗೆ ಪೀಡಿಸಿದ್ದಾಳೆ. ಬೆಂಗಳೂರಿನಲ್ಲಿ ವಾಸವಾಗಿರುವ ಮತ್ತೊಬ್ಬ ಪುತ್ರ ಶಿವಕುಮಾರ್ ಮನೆಗೆ ಹೋಗುವಂತೆ ಬಲವಂತ ಮಾಡಿದ್ದಲ್ಲದೇ, ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ತಲೆಗೆ ಸಣ್ಣ ಪುಟ್ಟ ಗಾಯಗಳಾಗಿರುವ ಚಿಕ್ಕತಾಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.