ಹೈದರಾಬಾದ್: ಭಾರತ್ ಜೋಡೋ ಯಾತ್ರೆಯು ಹೈದರಾಬಾದ್ ಪ್ರವೇಶಿಸಿದ್ದು, ಇಲ್ಲಿ ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು. ಈ ಮೂಲಕ ಯಾತ್ರೆಗೆ ಸೇರಿದ ಮೊದಲ ಬಾಲಿವುಡ್ ಸೆಲೆಬ್ರಿಟಿ ಆಗಿದ್ದಾರೆ
ಪೂಜಾ ಭಟ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸುತ್ತಾ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಪೂಜಾ ಅವರು ರಾಹುಲ್ ಗಾಂಧಿಯವರೊಂದಿಗೆ ಬಿರುಸಿನ ವೇಗದಲ್ಲಿ ಸ್ವಲ್ಪ ದೂರ ನಡೆದಾಗ ಜನರು ಹರ್ಷೋದ್ಗಾರ ಮಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ಹೈದರಾಬಾದ್ ಸಿಟಿಯ ಬಾಲನಗರ ಮುಖ್ಯ ರಸ್ತೆಯ ಎಂಜಿಬಿ ಬಜಾಜ್ ಶೋರೂಮ್‌ನಿಂದ ಯಾತ್ರೆ ಪುನರಾರಂಭವಾಯಿತು. ರಾಹುಲ್ ಗಾಂಧಿ ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದರು. 56ನೇ ದಿನದ ಯಾತ್ರೆಯಲ್ಲಿ ಪೂಜಾ ಭಟ್ ಭಾಗಿಯಾಗಿದ್ದು ವಿಶೇಷವಾಗಿತ್ತು.