ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಟೆಲ್, 5ಜಿ ಪ್ಲಸ್ ಸೇವೆಯನ್ನು ಆರಂಭಿಸುತ್ತಿದ್ದು, ಈ ಸೇವೆಯನ್ನು ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ನವೆಂಬರ್ 11ರಂದು ಉದ್ಘಾಟನೆಯಾಗಲಿರುವ ಎರಡನೇ ಟರ್ಮಿನಲ್ ನಲ್ಲಿ ಈ ಸೇವೆ ಲಭ್ಯವಾಗಲಿದ್ದು, ಆಗಮನ ಮತ್ತು ನಿರ್ಗಮನ ತಾಣ, ಲಾಂಜ್, ಬೋರ್ಡಿಂಗ್ ಗೇಟ್, ಸೆಕ್ಯೂರಿಟಿ ಗೇಟ್ ಮೊದಲಾದ ಸ್ಥಳಗಳಲ್ಲಿ 5ಜಿ ಪ್ಲಸ್ ಲಭ್ಯವಾಗಲಿದೆ.
ಏರ್ಟೆಲ್ ಈಗಾಗಲೇ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ 5 ಜಿ ಪ್ಲಸ್ ಸೇವೆಯನ್ನು ನೀಡುತ್ತಿದ್ದು, ಬಳಕೆದಾರರು ಅತಿ ವೇಗದ ಇಂಟರ್ನೆಟ್ ಸೌಲಭ್ಯ ಪಡೆಯುತ್ತಿದ್ದಾರೆ. 5ಜಿ ಸಪೋರ್ಟ್ ಮಾಡುವ ಮೊಬೈಲ್ ಫೋನ್ ಗಳಲ್ಲಿ, ಸಿಮ್ ಕಾರ್ಡ್ ಬದಲಾಯಿಸದೆ 5ಜಿ ಸೇವೆ ಪಡೆಯಬಹುದಾಗಿದೆ.