ಬೆಳಗಾವಿ: ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡದ ಪಾರ್ಥನಹಳ್ಳಿ ಬಳಿ ನಡೆದಿದೆ.
ಬೇಡರ ಹಟ್ಟಿಯ ಸಿದ್ದಪ್ಪ ವಾಲಿ ಮೃತರು. ಬೈಕ್ ಸವಾರ ಬೇಡರ ಹಟ್ಟಿಯಿಂದ ಅಥಣಿಗೆ ತೆರಳುತ್ತಿದ್ದರು. ಈ ವೇಳೆ ಪಾರ್ಥನಹಳ್ಳಿ ಗ್ರಾಮದ ಬಳಿ ಬಸ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ.
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.