ಮಂಗನಿಂದ ಮಾನವ ಎಂಬ ಮಾತಿದೆ. ಮನುಷ್ಯ ಏನೇನು ಮಾಡುತ್ತಾನೋ ಅದೆಲ್ಲವನ್ನೂ ಮಂಗ ಮಾಡುವುದರಲ್ಲಿ ನಿಸ್ಸೀಮ. ಕೆಲವೊಮ್ಮೆ ಅತಿಯಾಗಿ ಮನುಷ್ಯರಿಗೆ ಕೋತಿ ಹಿಂಸೆ ಕೊಡುವುದೂ ಇದ್ದರೆ, ಇನ್ನು ಕೆಲವೊಮ್ಮೆ ಅವು ನೋಡುಗರನ್ನು ನಕ್ಕು ನಗಿಸುವ ಕೆಲಸ ಮಾಡುತ್ತವೆ.
ವೈರಲ್ ಆಗಿರುವ ವಿಡಿಯೋ ಒಂದನ್ನು ನೋಡಿದರಂತೂ ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಿದೆ. ಕೆಲ ವರ್ಷಗಳ ಹಿಂದಿನ ವಿಡಿಯೋ ಇದಾಗಿದ್ದು ಪುನಃ ವೈರಲ್ ಆಗಿದೆ. ಇದರಲ್ಲಿ ಮನುಷ್ಯರಂತೆಯೇ ಕೋತಿಯು ಬಟ್ಟೆ ಒಗೆಯುವುದನ್ನು ನೋಡಬಹುದಾಗಿದೆ. ಮನುಷ್ಯರನ್ನೇ ಅನುಕರಿಸಿದ ಕೋತಿಯು ಸೋಪಿನ ನೀರಿನಿಂದ ಬಟ್ಟೆ ತೊಳೆಯುವುದನ್ನು ವಿಡಿಯೋದಲ್ಲಿ ನೋಡಬಹುದು.
ಮಾತ್ರವಲ್ಲದೇ ಜನರು ಬಟ್ಟೆ ತೊಳೆಯುವುದನ್ನು ನೋಡುತ್ತಿದ್ದ ಈ ಕೋತಿ, ಬಟ್ಟೆ ತೊಳೆಯಲು ಬ್ರಷ್ ಕೂಡ ಬಳಕೆ ಮಾಡಿದೆ. ಕೋವಿಡ್ ಟೈಂನಲ್ಲಿ ನನಗೂ ಬಟ್ಟೆ ತೊಳೆಯುವಂತಾಯಿತು ಎಂದು ತಮಾಷೆ ಮಾಡಿರುವ ಹಿನ್ನೆಲೆ ಧ್ವನಿ ಇದಕ್ಕೆ ಸೇರಿಸಿ ವೈರಲ್ ಮಾಡಲಾಗಿದೆ. ಕೆಲಸದವರನ್ನು ಇಟ್ಟುಕೊಳ್ಳುವ ಬದಲು ಮಂಗನನ್ನೇ ಸಾಕಿದರೆ ಎಷ್ಟು ಒಳ್ಳೆಯದು ಎಂದು ಕೆಲವರು ತಮಾಷೆ ಮಾಡಿದ್ದಾರೆ.