ಸರ್ಕಾರ ಡಿಜಿಟಲ್ ಯುಗ ಮಾಡಿದಾಗಿನಿಂದ ಹಣ ವಹಿವಾಟು ಮಾಡಲು ಬಹುತೇಕ ಜನ ಆನ್ ಲೈನ್ ಉಪಯೋಗಿಸುತ್ತಾರೆ. ಆದರೆ ಇ- ಬ್ಯಾಂಕಿಂಗ್ ಹಾಗೂ ಆನ್ ಲೈನ್ ಪಾವತಿ ಬಳಕೆ ಹೆಚ್ಚಿರೋದ್ರಿಂದ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಬೇರೆಯವರ ದಾಖಲೆ ನೀಡಿ ಸಿಮ್ ಪಡೆದು ವಂಚಿಸುವ ಪ್ರಕರಣ ಕೂಡ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಇವುಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದು ಕಠಿಣ ಕ್ರಮ ವಹಿಸುತ್ತಿದೆ.
ಹೌದು, ಬ್ಯಾಂಕ್ ಖಾತೆ ತೆರೆಯೋದು ಹಾಗೂ ಮೊಬೈಲ್ ಸಿಮ್ ಖರೀದಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಸಿಮ್ ಗಳು ಸುಲಭವಾಗಿ ಸಿಕ್ತಾ ಇರೋದ್ರಿಂದಲೇ ಬ್ಯಾಂಕ್ ಖಾತೆ ತೆರೆಯಲು ಸಹಾಯವಾಗ್ತಾ ಇದೆ. ಇತ್ತೀಚಿನ ವರದಿಯೊಂದಿರ ಪ್ರಕಾರ 2021-22ನೇ ಸಾಲಿನಲ್ಲಿ 41,000 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿವೆಯಂತೆ. ಹೀಗಾಗಿ ಮಹತ್ವದ ಸಭೆ ನಡೆಸಿ ಚರ್ಚೆ ಮಾಡಲಾಗಿದೆ.
ಒಂದು ಸಿಮ್ ತೆಗೆದುಕೊಳ್ಳಲು 21 ರೀತಿಯ ದಾಖಲೆಗಳನ್ನು ನೀಡಬೇಕು. ಆದರೆ, ಸರ್ಕಾರ ಈ ದಾಖಲೆಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದು, ಕೇವಲ 5 ದಾಖಲೆಗಳನ್ನು ನೀಡಿ ಸಿಮ್ ಪಡೆಯಬಹುದು. ಇಂಥಹದೊಂದು ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ನಕಲಿ ಸಿಮ್ ಹಾವಳಿ ಕಡಿಮೆ ಮಾಡಬಹುದು ಎಂಬುದು ಇದರ ಉದ್ದೇಶವಾಗಿದೆ.