ಶಾಪಿಂಗ್ ಮಾಡುವುದು ಎಂದರೆ ಒಂದು ರೀತಿಯ ಮಜದ ಅನುಭವ ನೀಡುತ್ತದೆ. ಕೆಲವರಿಗೆ ಮಾಲ್, ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ಶಾಪಿಂಗ್ ಮಾಡುವುದು ಇಷ್ಟವಾದರೆ ಕೆಲವರಿಗೆ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಶಾಪಿಂಗ್ ಮಾಡುವುದು ಇಷ್ಟ.
ಬಟ್ಟೆ ಬರೆಗಳ ಶಾಪಿಂಗ್ ಇರಬಹುದು, ಮನೆಗೆ ಬೇಕಾಗುವ ಇತರೆ ಸಾಮಾನು ಪದಾರ್ಥಗಳೇ ಇರಬಹುದು ಬೇಕು, ಬೇಡದ್ದನ್ನೆಲ್ಲ ಶಾಪಿಂಗ್ ಮಾಡದೆ ಅವಶ್ಯಕತೆ ಇರುವ ವಸ್ತುಗಳ ಪಟ್ಟಿ ಮಾಡಿ ರಿಯಾಯಿತಿ ದರದಲ್ಲಿ ದೊರೆಯುವ ಸಾಮಾನುಗಳನ್ನು ಆಯ್ಕೆ ಮಾಡಿ. ಉತ್ಪನ್ನದ ತಯಾರಿ ದಿನಾಂಕವನ್ನು ಪರಿಶೀಲಿಸಿ ಶಾಪಿಂಗ್ ಮಾಡಿ.
ನಿಮಗೆ ಅವಶ್ಯವಿರುವ ವಸ್ತುಗಳ ಪಟ್ಟಿ ಮಾಡಿ ನಿಮ್ಮ ಬಜೆಟ್ ಗೆ ಅನುಗುಣವಾಗಿ ವಸ್ತುಗಳನ್ನು ಖರೀದಿ ಮಾಡಿದರೆ ನಿಮ್ಮ ಜೇಬಿಗೆ ಅನವಶ್ಯವಾಗಿ ಕತ್ತರಿ ಬೀಳುವ ಪ್ರಮೇಯವಿರುವುದಿಲ್ಲ.
ಆನ್ಲೈನ್ ಮೂಲಕ ಶಾಪಿಂಗ್ ಮಾಡುವಾಗ ಯಾವುದೇ ಕಂಪನಿಯ ವೆಬ್ಸೈಟ್ನ ಸಂಪೂರ್ಣ ಮಾಹಿತಿ ಲಭ್ಯವಿಲ್ಲದಿದ್ದರೆ ಶಾಪಿಂಗ್ ಮಾಡಬೇಡಿ.
ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ಎಸಿ, ಟಿವಿ, ಫ್ರಿಡ್ಜ್, ಮೈಕ್ರೋವೇವ್ ಇತ್ಯಾದಿಗಳನ್ನು ಖರೀದಿಸುವಾಗ ವಾರಂಟಿಯನ್ನು ಪರಿಶೀಲಿಸಬೇಕು.
ಕೆಲವು ವಸ್ತುಗಳು ಅಗ್ಗವಾಗಿ ಕಾಣಿಸಬಹುದು ಆದರೆ ವಿತರಣಾ ಶುಲ್ಕ ಹೆಚ್ಚಾಗಿರುತ್ತದೆ.