ಹಿಂದೂ ಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅದನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವನ್ನು ಬೆಳೆಸಲಾಗುತ್ತದೆ. ಪ್ರತಿ ದಿನ ತುಳಸಿ ಗಿಡಕ್ಕೆ ಪೂಜೆ ಮಾಡೋದ್ರಿಂದ ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ತುಳಸಿ ಆರೋಗ್ಯಕ್ಕೆ ಕೂಡ ಒಳ್ಳೆಯದು. ಅದನ್ನು ಔಷಧಿ ರೂಪದಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ತುಳಸಿ ಗಿಡ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ. ನಕಾರಾತ್ಮಕ ಶಕ್ತಿ ಹೊಡೆದೋಡಿಸುವ ಜೊತೆಗೆ ಆರ್ಥಿಕ ವೃದ್ಧಿಗೆ ಕಾರಣವಾಗುತ್ತದೆ.
ತುಳಸಿ ಎಲೆ ಮಾತ್ರವಲ್ಲ ತುಳಸಿ ಬೇರಿಗೂ ಮಹತ್ವವಿದೆ. ಇದನ್ನು ಅತ್ಯಂತ ಪವಿತ್ರವೆನ್ನಲಾಗುತ್ತದೆ. ತುಳಸಿಯ ಬೇರಿನಲ್ಲಿ ಸಾಲಿಗ್ರಾಮ ನೆಲೆಸಿದೆ ಎಂಬ ನಂಬಿಕೆಯಿದೆ. ಸಂಪತ್ತು ಹೆಚ್ಚಾಗಬೇಕು ಎನ್ನುವವರು ತುಳಸಿ ಬೇರಿನ ಸಹಾಯ ಪಡೆಯಬಹುದು.
ಅದೃಷ್ಟ ನಿಮ್ಮ ಕೈ ಹಿಡಿಯಬೇಕು, ಯಶಸ್ಸು ನಿಮ್ಮದಾಗಬೇಕು, ಆರ್ಥಿಕ ಸಂಕಷ್ಟ ದೂರವಾಗಬೇಕು ಎನ್ನುವವರು ತುಳಸಿ ಬೇರನ್ನು ತೆಗೆದು ಚೆನ್ನಾಗಿ ತೊಳೆಯಬೇಕು. ಅದನ್ನು ಗಂಗಾಜಲದಲ್ಲಿ ತೊಳೆಯುವುದು ಮುಖ್ಯ. ನಂತ್ರ ಅದಕ್ಕೆ ಪೂಜೆ ಮಾಡಬೇಕು. ಆ ನಂತ್ರ ಈ ಬೇರನ್ನು ನೀವು ನಿಮ್ಮ ಬಳಿ ಅಥವಾ ಹಣವಿಡುವ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡಿದ್ರೆ ಶೀಘ್ರ ಲಾಭವನ್ನು ನೀವು ಪಡೆಯುತ್ತೀರಿ.
ತುಳಸಿ ಬೇರನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಂತ್ರ ಅದಕ್ಕೆ ದಾರ ಕಟ್ಟಿ, ಅದನ್ನು ನಿಮ್ಮ ತೋಳಿಗೆ ಕಟ್ಟಿಕೊಂಡ್ರೆ ಸಾಕಷ್ಟು ಲಾಭವಿದೆ. ನಿಮ್ಮ ಜಾತಕದಲ್ಲಿ ಗ್ರಹದೋಷವಿದ್ದರೆ ಇದ್ರಿಂದ ನಿವಾರಣೆಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.