ನದಿಯು ವರ್ಣಮಯವಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಒಮ್ಮೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಪೆರುವಿನಲ್ಲಿ ಕೆಂಪು ಬಣ್ಣದ ನದಿಯನ್ನು ನೀವಿಲ್ಲಿ ನೋಡಬಹುದು.
ಹಳೆಯದಾಗಿರುವ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದ್ದು, ನೋಡುಗರನ್ನು ಅಚ್ಚರಿಗೆ ತಳ್ಳುತ್ತದೆ. ದಕ್ಷಿಣ ಅಮೆರಿಕ ಖಂಡದ ಕಣಿವೆಯ ಮೂಲಕ ಈ ನದಿ ಹರಿಯುತ್ತದೆ. ಕುಸ್ಕೊದಲ್ಲಿರುವ ಈ ನದಿಯು ಚೆರ್ರಿ ಅಥವಾ ಇಟ್ಟಿಗೆ ಬಣ್ಣದ ಕೆಂಪು ನೀರನ್ನು ಹೊಂದಿದೆ.
ಇದನ್ನು ಸ್ಥಳೀಯವಾಗಿ ಪುಕಾಮಾಯು ಎಂದು ಕರೆಯಲಾಗುತ್ತದೆ. ಕ್ವೆಚುವಾ ಭಾಷೆಯಲ್ಲಿ, “ಪುಕಾ” ಎಂದರೆ ಕೆಂಪು, ಮತ್ತು “ಮಯು” ಎಂದರೆ ನದಿ.
ಮಣ್ಣಿನ ಸವೆತದಿಂದ ರೂಪುಗೊಂಡ ಜೇಡಿಮಣ್ಣಿನ ವಿವಿಧ ಪದರಗಳಲ್ಲಿ ಖನಿಜ ನಿಕ್ಷೇಪಗಳಿರುವುದರಿಂದ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಪರ್ವತಗಳ ಕೆಂಪು ಪ್ರದೇಶದಿಂದ ಬರುವ ಕಬ್ಬಿಣದ ಆಕ್ಸೈಡ್ ಇರುವಿಕೆಯಿಂದಾಗಿ ಬಣ್ಣವು ನಿರ್ದಿಷ್ಟವಾಗಿ ಕಂಡುಬರುತ್ತದೆ ಎನ್ನಲಾಗಿದೆ.