alex Certify ಪತ್ನಿಯಾದ ಯಾವ ಹೆಂಗಸೂ ಸರಿಯಿಲ್ಲ ಎಂದಾತನಿಗೆ ಈಗ 88 ನೇ ಮದ್ವೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯಾದ ಯಾವ ಹೆಂಗಸೂ ಸರಿಯಿಲ್ಲ ಎಂದಾತನಿಗೆ ಈಗ 88 ನೇ ಮದ್ವೆ….!

ಜಾವಾ: ಇಂಡೋನೇಷ್ಯಾದ ಪಶ್ಚಿಮ ಜಾವಾದ ಮಜಲೆಂಗ್ಕಾದ 61 ವರ್ಷದ ವ್ಯಕ್ತಿ ಈಗ 88ನೇ ಮದುವೆಗೆ ಸಿದ್ಧರಾಗಿದ್ದಾರೆ. 86ನೇ ಪತ್ನಿಯನ್ನೇ ಮತ್ತೊಮ್ಮೆ ಮದುವೆಯಾಗಲು ಅವರು ತಯಾರಿ ನಡೆಸಿರುವುದಾಗಿ ಟ್ರಿಬನ್‌ನ್ಯೂಸ್ ವರದಿ ಮಾಡಿದೆ.

ಈತನ ಹೆಸರು ಕಾನ್​. ಅನೇಕ ಬಾರಿ ಮದುವೆಯಾಗಿದ್ದಕ್ಕಾಗಿ ಈ ವ್ಯಕ್ತಿಗೆ ‘ಪ್ಲೇಬಾಯ್ ಕಿಂಗ್’ ಎಂಬ ಅಡ್ಡಹೆಸರು ಕೂಡ ಇದೆ. ರೈತನಾಗಿರುವ ಕಾನ್​, ತನ್ನ ಮಾಜಿ ಪತ್ನಿ ತನ್ನ ಬಳಿ ಮರಳುತ್ತಾಳೆ, ಆ ಭರವಸೆ ನನಗೆ ಇದೆ. ಇದೇ ಕಾರಣಕ್ಕೆ ಆಕೆಯನ್ನು ಮತ್ತೆ ಮದುವೆಯಾಗುತ್ತಿರುವುದಾಗಿ ಹೇಳಿದ್ದಾನೆ.

ನಾವು ಬೇರ್ಪಟ್ಟು ಬಹಳ ದಿನಗಳಾದರೂ ನಮ್ಮ ನಡುವಿನ ಪ್ರೀತಿ ಇನ್ನೂ ಗಟ್ಟಿಯಾಗಿದೆ ಎಂದಿರುವ ಆತ ತಾವಿಬ್ಬರೂ ಒಂದೇ ತಿಂಗಳು ಒಟ್ಟಿಗಿದ್ದೆವು. ಈಗ ಆಕೆಯೇ ನನಗೆ ಬೆಸ್ಟ್​ ಎನಿಸುತ್ತಿದೆ ಎಂದಿದ್ದಾನೆ.

ಅಂದಹಾಗೆ ಕಾನ್ ಮೊದಲ ಮದುವೆಯಾದಾಗ ಆತನಿಗೆ 14 ವರ್ಷ. ಮೊದಲ ಪತ್ನಿ ತನಗಿಂತ ಎರಡು ವರ್ಷ ದೊಡ್ಡವಳಾಗಿದ್ದಳು. ನನಗೆ ಆಕೆಯ ನಡವಳಿಕೆ ಇಷ್ಟವಾಗಲಿಲ್ಲ. ಅದಕ್ಕಾಗಿ ಎರಡನೆಯ ವಿವಾಹವಾದೆ. ಆದರೆ ಇದುವರೆಗೆ ಯಾರೂ ಸರಿ ಹೊಂದಿಕೆ ಆಗಲಿಲ್ಲ. ಆದ್ದರಿಂದ ಮದುವೆಯಾಗುತ್ತಾ ಇದ್ದೇನೆ, ಸರಿಯಾದ ಪಾರ್ಟನರ್​ ಸಿಗುವವರೆಗೆ ಮದುವೆಯಾದೆ. ಈಗ 86ನೇ ಪತ್ನಿಗೆ ಹೊಂದಾಣಿಕೆ ಆಗುತ್ತಿದೆ ಎನಿಸುತ್ತಿದೆ ಎಂದಿದ್ದಾನೆ ಕಾನ್​. ಈತನಿಗೆ ಎಷ್ಟು ಮಕ್ಕಳು ಎಂಬ ಬಗ್ಗೆ ಸರಿಯಾದ ಮಾಹಿತಿ ಹಂಚಿಕೊಂಡಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...