ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಕ್ರಿಯೆ ಆರಂಭಿಸಿದೆ. ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದ್ದು, 5000 ರೂ. ಶುಲ್ಕ ಕೊಡಬೇಕಿದೆ.
ನವೆಂಬರ್ 5 ರಿಂದ 15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2 ಲಕ್ಷ ರೂ. ನಿಧಿ ಕೊಡಬೇಕಿದೆ. ಪರಿಶಿಷ್ಟರಿಗೆ ಶೇಕಡ 50ರಷ್ಟು ರಿಯಾಯಿತಿ ಇದ್ದು, 1 ಲಕ್ಷ ನಿಧಿ ಕೊಡಬೇಕಿದೆ. ಅರ್ಜಿಯ ಜೊತೆಗೆ ಸಲ್ಲಿಕೆಯಾಗುವ ಹಣವನ್ನು ಕಟ್ಟಡ ನಿರ್ಮಾಣ ನಿಧಿಗೆ ನೀಡಬೇಕು. ಅರ್ಜಿ ಸಲ್ಲಿಕೆಗೆ ಯಾವುದೇ ವಯೋಮಿತಿ ಇರುವುದಿಲ್ಲ. ಪಕ್ಷ ತೊರೆದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಬೇರೆ ಪಕ್ಷಗಳಿಂದ ಬಂದವರು ಅರ್ಜಿ ಸಲ್ಲಿಸಬಹುದು.
ನಾನು ಸೇರಿದಂತೆ ಪಕ್ಷದ ಟಿಕೆಟ್ ಬಯಸುವ ಎಲ್ಲರೂ ಅರ್ಜಿ ಸಲ್ಲಿಸಬೇಕು. ಟಿಕೆಟ್ ಬಯಸುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.