![](https://kannadadunia.com/wp-content/uploads/2022/11/Food-groups-void-for-weight-loss_1200x800-3-1024x683-1.jpg)
ಬೆಳಗಿನ ಉಪಾಹಾರ ಅತ್ಯಂತ ಮುಖ್ಯ. ಬೆಳಗ್ಗೆ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ತೂಕವನ್ನು ಕಡಿಮೆ ಮಾಡಲು ಸಾಧ್ಯ. ಬೆಳಗ್ಗೆ ನಿದ್ದೆಯಿಂದ ಎದ್ದ 3 ಗಂಟೆಗಳ ಒಳಗೆ ಉಪಹಾರವನ್ನು ಸೇವಿಸಬೇಕು. ಕೆಲವರು ಉಪಹಾರವನ್ನೇ ತ್ಯಜಿಸಿಬಿಡುತ್ತಾರೆ. ಹೀಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದು. ಇದರ ಹೊರತಾಗಿ ಬೆಳಗಿನ ಉಪಾಹಾರದಲ್ಲಿ ನೀವು ಸೇವಿಸುವ ಕೆಲವೊಂದು ಪದಾರ್ಥಗಳು ಕೂಡ ತೂಕವನ್ನು ವೇಗವಾಗಿ ಹೆಚ್ಚಿಸುತ್ತವೆ.
ಜ್ಯೂಸ್: ಅನೇಕ ಜನರು ತೂಕ ಇಳಿಸಿಕೊಳ್ಳಲು ಬೆಳಗಿನ ಉಪಾಹಾರಕ್ಕೆ ಜ್ಯೂಸ್ ಕುಡಿಯುತ್ತಾರೆ. ಏಕೆಂದರೆ ಜ್ಯೂಸ್ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಆದರೆ ನೀವು ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗಬಹುದು. ಪ್ಯಾಕ್ ಮಾಡಲಾದ ಜ್ಯೂಸ್‌ಗಳಲ್ಲಿ ಬಹಳಷ್ಟು ಸಕ್ಕರೆ ಇರುತ್ತದೆ. ಬೆಳಗಿನ ಉಪಾಹಾರದಲ್ಲಿ ನೀವು ಆರೋಗ್ಯಕರವಾದ ಆಹಾರವನ್ನು ಸೇವಿಸಿದರೆ ಅದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಿಸ್ಕತ್ತು: ಬೆಳಗಿನ ಉಪಾಹಾರಕ್ಕೆ ಒಂದು ಕಪ್ ಚಹಾದೊಂದಿಗೆ ಬಿಸ್ಕತ್ತುಗಳನ್ನು ತಿನ್ನುವುದರಿಂದ ನಿಮ್ಮ ತೂಕ ಹೆಚ್ಚಾಗುವುದಿಲ್ಲ ಎಂದು ನೀವು ಭಾವಿಸುತ್ತೀರಾ. ಆದರೆ ಅದು ತಪ್ಪು. ಏಕೆಂದರೆ ಮಾರುಕಟ್ಟೆಯಲ್ಲಿ ಸಿಗುವ ಡೈಜೆಸ್ಟಿವ್ ಬಿಸ್ಕತ್‌ಗಳಲ್ಲಿ ಕ್ಯಾಲೋರಿ ಮತ್ತು ಸಕ್ಕರೆ ಅಂಶವಿದ್ದು ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ನೀವು ಬೆಳಗಿನ ಉಪಾಹಾರದಲ್ಲಿ ಬಿಸ್ಕತ್ತುಗಳನ್ನು ಸೇವಿಸಿದರೆ, ನಿಮ್ಮ ತೂಕವು ವೇಗವಾಗಿ ಹೆಚ್ಚಾಗುತ್ತದೆ.
ಪರೋಟ: ಹೆಚ್ಚಿನ ಜನರು ಬೆಳಗಿನ ಉಪಾಹಾರಕ್ಕಾಗಿ ಪರೋಟಾ ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಾಗಬಹುದು. ಆದ್ದರಿಂದ ನೀವು ಸ್ಲಿಮ್ ಆಗಲು ಬಯಸಿದರೆ ಬೆಳಗ್ಗೆ ಪರೋಟ ಸೇವಿಸಬೇಡಿ.