alex Certify ತಲಾ ಒಂದು ಲಕ್ಷ ರೂಪಾಯಿಗಳಂತೆ 100 ಹಳೆ ಬಸ್ಸುಗಳ ಮಾರಾಟಕ್ಕೆ ಮುಂದಾದ ಬಿಎಂಟಿಸಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲಾ ಒಂದು ಲಕ್ಷ ರೂಪಾಯಿಗಳಂತೆ 100 ಹಳೆ ಬಸ್ಸುಗಳ ಮಾರಾಟಕ್ಕೆ ಮುಂದಾದ ಬಿಎಂಟಿಸಿ…!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸುಸ್ಥಿತಿಯಲ್ಲಿರುವ ನೂರು ಹಳೆ ಬಸ್ಸುಗಳನ್ನು ತಲಾ ಒಂದು ಲಕ್ಷ ರೂಪಾಯಿಗಳಂತೆ ಮಾರಾಟ ಮಾಡಲು ಮುಂದಾಗಿದೆ. ವಾಯುವ್ಯ ಸಾರಿಗೆ ನಿಗಮ ಈ ಬಸ್ ಗಳನ್ನು ಖರೀದಿ ಮಾಡುತ್ತಿದ್ದು, ಇದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

8.5 ಲಕ್ಷದಿಂದ 9.5 ಲಕ್ಷ ಕಿಲೋಮೀಟರ್ ಕ್ರಮಿಸಿರುವ ಬಸ್ಸುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈಗಾಗಲೇ 30 ಬಸ್ಸುಗಳನ್ನು ವಾಯುವ್ಯ ಸಾರಿಗೆ ನಿಗಮಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳಲಾಗಿದೆ.

ಈ ಬಸ್ ಗಳು ಸುಸ್ಥಿತಿಯಲ್ಲಿದ್ದು ಪ್ರಯಾಣಿಕರನ್ನು ಕರೆದೊಯ್ಯಲು ಯೋಗ್ಯವಾಗಿವೆ ಎನ್ನಲಾಗಿದೆ. ಆದರೂ, ಬಸ್ಸುಗಳನ್ನು ಪಡೆದುಕೊಳ್ಳುವ ಮುನ್ನ ವಾಯುವ್ಯ ಸಾರಿಗೆ ನಿಗಮದ ತಾಂತ್ರಿಕ ಸಿಬ್ಬಂದಿ ಇವುಗಳನ್ನು ಪರಿಶೀಲಿಸಿ ಕಾರ್ಯಕ್ಷಮತೆ ಕುರಿತು ಪ್ರಮಾಣ ಪತ್ರ ಪಡೆಯಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...